ಮಾ.23ರಿಂದ ಉಡುಪಿಗೆ ದಿನ ಬಿಟ್ಟು ದಿನ ನೀರು
ಉಡುಪಿ, ಮಾ.21: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯನ್ನು ಎರಡು ವಿಭಾಗಗಳಾಗಿ ಮಾಡಿ, ಮಾ.23 ಗುರುವಾರದಿಂದ ದಿನ ಬಿಟ್ಟು ದಿನ ಬೆಳಗ್ಗೆ 6:00 ಗಂಟೆಗೆ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಮಾ.23ರಂದು ಈ ಕೆಳಗಿನ ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುವುದು. ಕುಂಜಿಬೆಟ್ಟು, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ, ಶಿರಿಬೀಡು, ಕೊಳ, ವಡಬಾಂಡೇಶ್ವರ, ಕಲ್ಮಾಡಿ, ಇಂದಿರಾನಗರ, ಚಿಟ್ಪಾಡಿ, ಬಡಗುಬೆಟ್ಟು, ಕೊಡವೂರು, ಕಸ್ತೂರ್ಬಾನಗರ, ಮಲ್ಪೆ ಸೆಂಟ್ರಲ್, ಇಂದ್ರಾಳಿ, ಸಗ್ರಿ, ಮೂಡುಪೆರಂಪಳ್ಳಿ ವಾರ್ಡುಗಳು.
ಮಾ.24ರಂದು ಈ ಕೆಳಗಿನ ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುವುದು. ಸರಳೇಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡುಗಳು.
ಅನಂತರ ದಿನ ಬಿಟ್ಟು ದಿನ ನೀರು ಸರಬರಾಜು ಇದೇ ಮಾದರಿಯಲ್ಲಿ ನಡೆಯಲಿದೆ. ನಳ್ಳಿ ನೀರು ಬಂದ ದಿನ ಆಯಾ ವಾರ್ಡುಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದರಲ್ಲಿ ಆ ದಿನ ಮಾತ್ರ ನೀರು ಸರಬರಾಜು ಆಗದಿದ್ದ ನಿರ್ದಿಷ್ಟ ಮನೆಗಳಿಗೆ ಮಾತ್ರ ಟ್ಯಾಂಕರ್‌ಗಳ ಮೂಲಕ ಕುಟುಂಬಕ್ಕೆ ತಲಾ 500 ಲೀ.ನೀರು ಸರಬರಾಜು ಮಾಡಲಾಗುವುದು.
ಸಾರ್ವಜನಿಕರು ತಮ್ಮ ದೂರುಗಳಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವಂತೆ ತಿಳಿಸಲಾಗಿದೆ. 8496989248, 8496989166, 8496989184, 8496989122 ಈ ಮೊಬೈಲ್‌ಗಳು ತಮ್ಮ ದೂರಿಗೆ ಸ್ಪಂದಿಸದಿದ್ದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಗಣೇಶ್ (ಮೊಬೈಲ್: 8496989759) ಅಥವಾ ಪರಿಸರ ಅಭಿಯಂತರ ರಾಘವೇಂದ್ರ ಬಿ.ಎಸ್. (ಮೊ:9448507244) ಇವರಿಗೆ ಕರೆ ಮಾಡಬಹುದು.
ಜೀವಜಲ ನೀರಿನ ಸಂರಕ್ಷಣೆ ಹಾಗೂ ಮಿತವಾದ ಬಳಕೆಗೆ ಉಡುಪಿಯ ನಾಗರಿಕರು ಆದ್ಯತೆ ನೀಡಿ ನೀರಿನ ಅಭಾವ ಇರುವ ಈ ಸಮಯದಲ್ಲಿ ನಗರ ಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರಾದ ಡಿ.ಮಂಜುನಾಥಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.