ನಿಷೇಧಿತ ದೇಶಗಳ ಪಟ್ಟಿಯಿಂದ ಇರಾಕ್ ಹೊರಗೆ ; ಟ್ರಂಪ್‌ಗೆ ಪ್ರಧಾನಿಯಿಂದ ಕೃತಜ್ಞತೆ

Update: 2017-03-21 15:28 GMT

ವಾಶಿಂಗ್ಟನ್, ಮಾ. 21: ಅಮೆರಿಕ ಪ್ರವೇಶ ನಿಷೇಧ ಪಟ್ಟಿಯಿಂದ ಇರಾಕನ್ನು ಹೊರಗಿರಿಸಿರುವುದಕ್ಕೆ ಆ ದೇಶದ ಪ್ರಧಾನಿ ಹೈದರ್ ಅಲ್-ಅಬಾದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಸೋಮವಾರ ಕೃತಜ್ಞತೆ ಸಲ್ಲಿಸಿದ್ದಾರೆ ಹಾಗೂ ಐಸಿಸ್ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಪ್ರಬಲ ಸಹಕಾರ ಕೋರಿದ್ದಾರೆ.

ಉಭಯ ನಾಯಕರು ಶ್ವೇತಭವನದಲ್ಲಿ ಮೊದಲ ಬಾರಿಗೆ ಮುಖಾಮುಖಿ ಮಾತುಕತೆ ನಡೆಸಿದರು.ಇರಾಕ್‌ನ ಭೂಭಾಗಗಳನ್ನು ಆಕ್ರಮಿಸಿರುವ ಐಸಿಸ್ ವಿರುದ್ಧ ಅಬಾರಿ ಯುದ್ಧದಲ್ಲಿ ತೊಡಗಿದ್ದಾರೆ.

ಟ್ರಂಪ್‌ರ ಮೂಲ ಮುಸ್ಲಿಮ್ ನಿಷೇಧ ಆದೇಶದಲ್ಲಿ ನಿಷೇಧಕ್ಕೊಳಗಾದ ಪಟ್ಟಿಯಲ್ಲಿ ಇರಾಕ್‌ನ ಹೆಸರಿತ್ತು. ಅಬಾದಿಯ ಮನವಿಯ ಹಿನ್ನೆಲೆಯಲ್ಲಿ, ಪರಿಷ್ಕೃತ ಆದೇಶವೊಂದನ್ನು ಹೊರಡಿಸಿದ ಟ್ರಂಪ್, ಇರಾಕನ್ನು ನಿಷೇಧಿತ ದೇಶಗಳ ಪಟ್ಟಿಯಿಂದ ಹೊರಗಿರಿಸಿದರು.

‘‘ಅಮೆರಿಕ ಪ್ರವೇಶ ನಿಷೇಧಿತ ದೇಶಗಳ ಪಟ್ಟಿಯಿಂದ ಇರಾಕನ್ನು ಹೊರಗಿರಿಸಿರುವುದಕ್ಕೆ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಇರಾಕ್‌ನ ಮನವಿಗೆ ಸಿಕ್ಕಿದ ಸಕಾರಾತ್ಮಕ ಪ್ರತಿಕ್ರಿಯೆಯಾಗಿದೆ ಹಾಗೂ ಅಮೆರಿಕ-ಇರಾಕ್ ಬಾಂಧವ್ಯದ ವೌಲ್ಯವನ್ನು ಹೆಚ್ಚಿಸಿದೆ’’ ಎಂದು ಅಬಾದಿ ಟ್ರಂಪ್‌ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News