×
Ad

ಲೊರೆಟ್ಟೊ: ಬಸ್ಸಿಗೆ ನುಗ್ಗಿ ತಂಡದಿಂದ ಹಲ್ಲೆ

Update: 2017-03-21 22:05 IST

ಬಂಟ್ವಾಳ, ಮಾ. 21: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ತಂಡವೊಂದು ಬಲ್ಲಾಲ್ ಮೋಟರ್ಸ್ ಎಂಬ ಖಾಸಗಿ ಬಸ್‌ಗೆ ನುಗ್ಗಿ ನಿರ್ವಾಹಕನಿಗೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಮಧ್ಯಾಹ್ನ ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಲೊರೆಟ್ಟೊ ಎಂಬಲ್ಲಿ ನಡೆದಿದೆ.

ಕೊಯಿಲ ಗ್ರಾಮದ ಅಣ್ಣಳಿಕೆ ನಿವಾಸಿ ಮಿಥುನ್ ಕುಮಾರ್ ಹಲ್ಲೆಗೊಳಗಾದ ಬಸ್ ನಿರ್ವಾಹಕ. ಈ ಬಸ್ಸಿನ ಎದುರು ಸಂಚರಿಸುತ್ತಿದ್ದ ರಿಕ್ಷಾವೊಂದರಲ್ಲಿ ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರನ್ನು ಕೂರಿಸಿರುವುದನ್ನು ಬಸ್ಸಿನ ನಿರ್ವಾಹಕ ಪ್ರಶ್ನಿಸಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ರಿಕ್ಷಾ ಚಾಲಕ ಸಹಿತ ನಾಲ್ವರು ಮತ್ತು ಬೈಕಿನಲ್ಲಿ ಬಂದಿದ್ದ ಇಬ್ಬರು ಸೇರಿ ಒಟ್ಟು ಆರು ಮಂದಿ ಅಪರಿಚಿತರು ಬಸ್ಸಿಗೆ ನುಗ್ಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿರುವುದಾಗಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News