ಬಿ.ಸಿ.ರೋಡಿನ ಬಾರ್ ಅಂಡ್ ಫ್ಯಾಮಿಲ್ ರೆಸ್ಟೋರೆಂಟ್‌ನಲ್ಲಿ ಬೆಂಕಿ ಆಕಸ್ಮಿಕ : ಲಕ್ಷಾಂತರ ರೂ. ನಷ್ಟ

Update: 2017-03-21 17:03 GMT

ಬಂಟ್ವಾಳ, ಮಾ. 21: ಬಿ.ಸಿ.ರೋಡಿನ ಬಾರ್ ಅಂಡ್ ಫ್ಯಾಮಿಲ್ ರೆಸ್ಟೋರೆಂಟ್‌ನಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ತಡರಾತ್ರಿಯ ವೇಳೆ ನಡೆದಿದೆ.

ಇಲ್ಲಿನ ಹೃದಯ ಭಾಗದಲ್ಲಿರುವ ಸನ್ಮಾನ್ ಬಾರ್ ಎಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಮಧ್ಯರಾತ್ರಿ 1 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣ ಮಾತ್ರದಲ್ಲೇ ಬೆಂಕಿ ವ್ಯಾಪಿಸಿ ರೆಸ್ಟೋಂರೆಂಟ್‌ನ ಭಾಗಶಃ ಸೊತ್ತುಗಳನ್ನು ಆಹುತಿ ಪಡೆದಿದೆ.

ರೆಫ್ರಿಜರೇಟರ್, ಫ್ಯಾನ್, ಎಸಿ, ಟೇಬಲ್ ಚೆಯರ್ ಸೇರಿದಂತೆ ಅಪಾರ ವಸ್ತಗಳು ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News