ದ.ಕ. ಮದ್ರಸ ಮ್ಯಾನೇಜ್‌ಮೆಂಟ್ ಖಂಡನೆ
Update: 2017-03-21 23:08 IST
ಮುಲ್ಕಿ, ಮಾ.21: ಕಾಸರಗೋಡಿನ ಬಟ್ಟಂಪಾರೆ ಹಳೆ ಚೂರಿ ಮಸೀದಿಯಲ್ಲಿ ಮದ್ರಸ ಅಧ್ಯಾಪಕ ರಿಯಾಝ್ ವೌಲವಿ ಅವರನ್ನು ದುಷ್ಕರ್ಮಿಗಳು ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿರುವುದನ್ನು ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಉಪಾಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಸೀದಿಗೆ ಕಲ್ಲು ತೂರಾಟ ನಡೆಸಿ ಬಳಿಕ ಒಳಭಾಗಕ್ಕೆ ಬಂದು ಸಮಾಜ ತಿದ್ದಿ ತೀಡುವ ಅದ್ಯಾಪಕನೊಬ್ಬನನ್ನು ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿರುವುದು ಸಂವಿಧಾನವನ್ನು ಕೊಲೆ ಮಾಡಿದಂತೆ ಎಂದು ಉಲ್ಲೇಖಿಸಿದ್ದಾರೆ.
ಪ್ರಕರಣ ಸಂಬಂಧ ದಕ್ಷಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿ ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ತೀವ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗುವುದು ಎಂದಿರುವ ಅವರು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಅಪರಾಧಿಗಳ ಬಂಧನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.