×
Ad

ಎಸ್.ಕೆ.ಎಸ್.ಎಮ್, ಎಸ್.ಇ.ಬಿ, ಕೆ.ಎಸ್.ಎಫ್ ವತಿಯಿಂದ ಉಳ್ಳಾಲದಲ್ಲಿ ದ್ವಿತೀಯ ಕುರ್ ಆನ್ ಪಬ್ಲಿಕ್ ಪರೀಕ್ಷೆ

Update: 2017-03-21 23:59 IST

ಉಳ್ಳಾಲ,ಮಾ.21: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್ ಮಂಗಳೂರು, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್ ಮೆಂಟ್ ರಿಯಾದ್ ಇದರ ಜಂಟಿ ಆಶ್ರಯದಲ್ಲಿ ಮಾರ್ಚ್ 19ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 10 ರಿಂದ 11:30ರವರೆಗೆ ಇಸ್ಲಾಹೀ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲದಲ್ಲಿ ದ್ವಿತೀಯ ಕುರ್ ಆನ್ ಪಬ್ಲಿಕ್ ಪರೀಕ್ಷೆಯನ್ನು ಹಮ್ಮಿ ಕೊಳ್ಳಲಾಯಿತು. ಪವಿತ್ರ ಕುರ್ ಆನಿನ 69ನೇ ಅಧ್ಯಾಯ ಸೂರಃ ಅಲ್ ಹಾಕ್ಕ ಮತ್ತು 70ನೇ ಅಧ್ಯಾಯ ಸೂರಃ ಅಲ್ ಮಆರಿಜ್ ಈ ಎರಡು ಸೂರಃಗಳನ್ನು ಆಧಾರವಾಗಿಟ್ಟು ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು  .

ಜೊತೆಗೆ ಪುರುಷರೂ ವಿಧ್ಯಾರ್ಥಿಗಳೂ ಈ ಪರೀಕ್ಷೆ ಬರೆದರು. ಇದು ಕುರ್ ಆನ್ ನ ಬಗ್ಗೆ ತಿಳಿಯದವರಿಗೂ ಕುರ್ ಆನನ್ನು ಕಲಿಯಲು ಆಸಕ್ತಿ ಹೊಂದಿದವರಿಗೂ ಹತ್ತು ವರ್ಷದೊಳಗೆ ಪವಿತ್ರ ಕುರ್ ಆನನ್ನು ಪೂರ್ಣವಾಗಿ ಕಲಿಸಿಕೊಡುವ ಯೋಜನೆಯ ದ್ವಿತೀಯ ಪರೀಕ್ಷೆಯಾಗಿದೆ.

ಎಸ್.ಕೆ.ಎಸ್.ಎಮ್ ಮಂಗಳೂರು ಇದರ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ, ಸಲಫಿ ಎಜುಕೇಶನ್ ಬೋರ್ಡ್ ನ ಕೋಶಾಧಿಕಾರಿ ಕೆ.ಅಹ್ಮದ್ ಬಾವ ಕಣ್ಣೂರು, ಅಧ್ಯಕ್ಷ ಮುಸ್ತಫ ದಾರಿಮಿ, ಕಾರ್ಯದರ್ಶಿ ಅಬೂಬಿಲಾಲ್ ಎಸ್.ಎಮ್, ಇಸ್ಲಾಹೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಝ್ಝಾಕ್ ಗೋಲ್ತಮಜಲ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಇದರ ಅಧ್ಯಕ್ಷ ಮೂಸಾ ತಲಪಾಡಿ ಮತ್ತು ಮುಜಾಹಿದ್ ಗರ್ಲ್ಸ್ ಮೂವ್ಮೆಂಟ್ ರಿಯಾದ್ ಇದರ ಅಧ್ಯಕ್ಷೆ ಉಮ್ಮು ಅರ್ಶದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News