ಅಮೆರಿಕ, ರಷ್ಯಗಳ ನಡುವೆ ಮುಂದಿನ ಪರಮಾಣುಯುದ್ಧ ಸಾಧ್ಯತೆ: ಅಮೆರಿಕನ್ ಕಾಂಗ್ರೆಸ್ ನ ಸದಸ್ಯ

Update: 2017-03-22 07:00 GMT

ವಾಷಿಂಗ್ಟನ್, ಮಾ. 22: ಅಮೆರಿಕ ಕಾಂಗ್ರೆಸ್‌ನ ಮೆಸಾಚುಸೆಟ್ಸ್ ಪ್ರತಿನಿಧಿ ಸೇತ್ ಮೌಲ್ಟನ್ ಅವರು, ದ ಹಿಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಮತ್ತುರಷ್ಯಗಳ ನಡುವೆ ಭವಿಷ್ಯದಲ್ಲಿ ಪರಮಾಣು ಯುದ್ಧ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ರಷ್ಯದ ಕಡೆಯಿಂದ ಆಗುವ ಯುದ್ಧ ಪ್ರಚೋದನೆಗೆ ಈಗಿಂದಲೇ ವೈಟ್ ಹೌಸ್ ತಕ್ಕ ಪ್ರತಿಯೋಜನೆ ರೂಪಿಸಬೇಕಾಗಿದೆ ಎಂದು ಸೇತ್ ಮೌಲ್ಟನ್ ವೈಟ್ ಹೌಸ್‌ಗೆ ಸಲಹೆ ನೀಡಿದ್ದಾರೆ.

ಅಮೆರಿಕ ಕಾಂಗ್ರೆಸ್ ನೀತಿಯ ಪ್ರಕಾರ ಯಾವ ಸಮಯದಲ್ಲಿಯೂ ಪರಮಾಣು ಆಯುಧಗಳನ್ನು ಉಪಯೋಗಿಸುವ ಅವಕಾಶ ವಿದೆ. ಒಂದು ವೇಳೆ ರಷ್ಯ ಯುರೋಪಿನ ನಮ್ಮ ಮಿತ್ರರ ಮೇಲೆ ಪರಮಾಣು ದಾಳಿಗೆ ಮುಂದಾದರೆ ತಕ್ಕ ಉತ್ತರವನ್ನು ರಷ್ಯದ ಶೈಲಿಯಲ್ಲಿ ನೀಡಬೇಕಾಗುತ್ತದೆ ಎಂದು ಮೌಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ರಷ್ಯ ಯುರೋಪಿನಲ್ಲಿರುವ ಅಮೆರಿಕದ ಸೈನಿಕರ ಮೇಲೆ ರಷ್ಯ ಗುರಿಯಿಟ್ಟರೆ, ಉದಾಹರಣೆಗೆ ಪೊಲೆಂಡ್‌ನಲ್ಲಿರುವ ಅಮೆರಿಕದ ಸೈನಿಕರ ವಿರುದ್ಧ ಕಾರ್ಯಾಚರಣೆಗಿಳಿದರೆ ನಾವು ಇನ್ನೇನು ಮಾಡಲು ಸಾಧ್ಯ ಎಂದು ಮೌಲ್ಟನ್ ಪ್ರಶ್ನಿಸಿದರೆಂದು ಪತ್ರಿಕೆ ಬರೆದಿದೆ. ಟ್ರಂಪ್ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಮೌಲ್ಟನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News