​ತಲಪಾಡಿ: ನೀರಿನ ಪೈಪ್‌ಲೈನ್ ಒದಗಿಸಲು ಆಗ್ರಹಿಸಿ ಎಸ್ಸೆಸ್ಸೆಫ್‌ನಿಂದ ಗ್ರಾಪಂಗೆ ಮನವಿ

Update: 2017-03-22 07:48 GMT

ಮಂಗಳೂರು, ಮಾ.22: ತಲಪಾಡಿ ಪಂಚಾಯತ್ ವ್ಯಾಪ್ತಿಯ ಎಲ್ಲ ಮನೆಗಳಿಗೆ ನೀರಿನ ಪೈಪ್‌ಲೈನ್ ಒದಗಿಸಲು ಹಾಗೂ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ ತಲಪಾಡಿ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಲಪಾಡಿ ಸೆಕ್ಟರ್ ಅಧ್ಯಕ್ಷರಾದ ರಹೀಂ ಝುಹ್ರಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಹಮೀದ್ ತಲಪಾಡಿ, ಶಿಹಾಬುದ್ದೀನ್ ಕೆ.ಸಿ .ರೋಡ್, ಫಾರೂಕ್ ಕೆ.ಎಂ., ಬಿ.ಎಚ್.ಇಸ್ಮಾಯೀಲ್, ಹಕೀಂ ಪೂಮಣ್, ಅಲ್ತಾಫ್, ರಶೀದ್ ಸಿ.ಎಂ.ಆರ್. ಹಾಗೂ ತಲಪಾಡಿ ಸೆಕ್ಟರ್ ವ್ಯಾಪ್ತಿಯ ಎಸ್ಸೆಸ್ಸೆಫ್ ಎಸ್‌ವೈಎಸ್‌ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News