×
Ad

ಬರುತ್ತಿದೆ ಕೇರಳದಲ್ಲಿ 2000 ಸ್ಥಳಗಳಲ್ಲಿ ಉಚಿತ ವೈಫೈ

Update: 2017-03-22 17:23 IST

ತಿರುವನಂತಪುರಂ, ಮಾ. 22: ಕೇರಳದಲ್ಲಿ ಅತ್ಯಂತಬ್ಯೂಸಿಯಾದ ಬಸ್‌ಸ್ಟಾಂಡ್‌ಗಳಲ್ಲಿ ಮತ್ತು ಪಾರ್ಕ್‌ಗಳಲ್ಲಿ ಮೂರು ತಿಂಗಳೊಳಗೆ ಉಚಿತ ವೈಫೈ ಸೇವೆ ದೊರಕಲಿದೆ. ಜುಲೈಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದ 1000ವೈಫೈ ಹಾಟ್‌ಸ್ಪಾಟ್‌ಗಳು, ಈ ಬಜೆಟ್‌ನಲ್ಲಿ ಭರವಸೆ ನೀಡಲಾದ 1000ವೈಫೈಗಳು ಸೇರಿ ಒಟ್ಟು2000 ಉಚಿತವೈಫೈ ಹಾಟ್‌ಸ್ಪಾಟ್‌ಗಳನ್ನು ಕೇರಳ ಸರಕಾರ ಸ್ಥಾಪಿಸಲಿದೆ.

ಹೆಚ್ಚುಉಪಕಾರವಾಗುವ ಸ್ಥಳಗಳನ್ನು ಹುಡುಕಿ ಪಟ್ಟಿ ತಯಾರಿಸಿ ಈ ತಿಂಗಳಲ್ಲಿ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಐಟಿ ಇಲಾಖೆ ಆಗ್ರಹಿಸಿದೆ. ಪಟ್ಟಿ ಲಭಿಸಿದರೆ ಕೂಡಲೇ ಮೊಬೈಲ್ ಸೇವಾದಾತರಿಂದ ಟೆಂಡರ್ ಮೂಲಕ ಕೆಲಸ ಆರಂಭಿಸಲಾಗುವುದು. 50 ಕೋಟಿ ರೂಪಾಯಿ ವೆಚ್ಚದಲ್ಲಿ ಐಟಿ ಮಿಷನ್‌ನ್ನು ಕೇರಳ ಸರಕಾರ ಜಾರಿಗೆ ತರುತ್ತಿದೆ. ಬಸ್‌ಸ್ಟಾಂಡ್, ರೈಲ್ವೆಸ್ಟೇಶನ್, ಸಿವಿಲ್ ಸ್ಟೇಶನ್, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಪ್ರಥಮ ದರ್ಜೆ ಗ್ರಂಥಾಲಯಗಳು ಮುಂತಾದೆಡೆ ಉಚಿತ ವೈಫೈ ಸೇವೆ ಲಭಿಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News