ಬೆಳ್ತಂಗಡಿ: ಮಾ.22 ರಿಂದ ಅಂಗನವಾಡಿಗಳು ಅನಿರ್ಧಿಷ್ಟಾವಧಿ ಬಂದ್
ಬೆಳ್ತಂಗಡಿ,ಮಾ.22: ಮಾ 20 ರಿಂದ ಬೆಂಗಳೂರಲ್ಲಿ ವಿಧಾನಸೌಧದ ಎದುರು ಅಂಗನವಾಡಿ ನೌಕರರು ಕನಿಷ್ಟ ವೇತನಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರಕಾರ ಈ ಮಹಿಳಾ ನೌಕರರ ಬಗ್ಗೆ ಯಾವುದೇ ಕನಿಕರತೋರಿಸದೆ ನಿರ್ಲಕ್ಷ ಮಾಡುತ್ತಿದೆಯಾದ್ದರಿಂದ ಹೋರಾಟ ಇನ್ನಷ್ಟು ಪ್ರಬಲವಾಗಿ ಮುಂದುವರಿಸಲು ನಿರ್ಧರಿಸಲಾಗಿದ್ದು ಮಾ.22 ರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಅಂಗನವಾಡಿಗಳನ್ನು ಮುಚ್ಚಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ದರಾಜ್ಯ ಸಮಿತಿ ಸದಸ್ಯೆ ಹಾಗೂ ಬೆಳ್ತಂಗಡಿ ತಾಲೂಕುಸಮಿತಿ ಅದ್ಯಕ್ಷೆ ಧಮಯಂತಿ, ಕಾರ್ಯದರ್ಶಿ ಲೀಲಾವತಿ ಕಳೆಂಜ, ಮುಖಂಡರುಗಳಾದ ಪುಷ್ಪಾವತಿ, ಎಮ್ಮಿ ಫೆರ್ನಾಂಡೀಸ್, ಕುಸುಮ ಬಂದಾರು, ಮೊದಲಾವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರವಾಗಲಿ, ರಾಜ್ಯದ ಕಾಂಗ್ರೇಸ್ ಸರಕಾರವಾಗಲಿ ಅಂಗನವಾಡಿ ನೌಕರರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬಾಯಲ್ಲಿ ಮಾತೆ ಮಾತೆಎನ್ನುವ ನರೇಂದ್ರ ಮೋದಿ ವಾಸ್ತವದಲ್ಲಿ ಮಹಿಳಾ ಶೋಷೆಯನ್ನೇ ಮಾಡುತ್ತಿದ್ದಾರೆ ದಿನಾಂಕ 22-03-2017 ರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಲು ನಿರ್ಧರಿಸಿವೆ. ಹಾಗೂ ಸುಮಾರು 50 ನೌಕರರು ಹೋರಾಟದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದಾರೆ ಎಂದವರು ತಿಳಿಸಿದರು. ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಹೋರಾಟದ ಯಶಸ್ವಿಗೆ ಸಹಕರಿಸಲು ಅವರು ಅಂಗನವಾಡಿ ನೌಕರರಿಗೆ ಕರೆನೀಡಿದ್ದಾರೆ. ಪುಟಾಣಿಗಳ ಹೆತ್ತವರು ಈ ಹೋರಾಟಕ್ಕೆ ಬೆಂಬಲ ನೀಡಿ ಸಹಕರಿಸಲು ಈ ಸಂದರ್ಬ ಸಾರ್ವಜನಿಕರಲ್ಲಿ ಅವರು ವಿನಂತಿಸಿದ್ದಾರೆ.