×
Ad

ಎಚ್‌ಟಿ ಲೈನ್ ಮೇಲೆ ಮರ ಬಿದ್ದು ವಾರ ಕಳೆದರೂ ಸ್ಪಂದಿಸದ ಮೆಸ್ಕಾಂ

Update: 2017-03-22 19:58 IST

ಕಡಬ, ಮಾ.22. ಇಚಿಲಂಪಾಡಿ ಗ್ರಾಮದ ನೇರ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರಸ್ತೆಯ ಪಳಿಕೆ ಎಂಬಲ್ಲಿ ಅಂಬೇಡ್ಕರ್ ಕಾಲನಿಯ ನಿವಾಸಿ ಸತೀಶ್ ಪಳಿಕೆಯವರ ಮನೆ ಸಮೀಪ ಎಚ್‌ಟಿ ಲೈನ್ ಮೇಲೆ ಮರವೊಂದು ತುಂಡಾಗಿ ಬಿದ್ದು ವಾರ ಕಳೆದರೂ, ಗಮನಹರಿಸದ ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿತನವು ಜನಾಕ್ರೋಶಕ್ಕೆ ಕಾರಣವಾಗಿದೆ.

ಲೈನ್ ಮೇಲೆ ಮರ ಬಿದ್ದ ವಿಷಯವನ್ನು ಸ್ಥಳೀಯ ಗ್ರಾ.ಪಂ. ಸದಸ್ಯರಾದ ಮಾಧವರವರು ಮೆಸ್ಕಾಂ ಲೈನ್‌ಮ್ಯಾನ್ ಹಾಗೂ ಜೆಇಯವರಿಗೆ ಮಾಹಿತಿ ನೀಡಿ ವಾರ ಕಳೆದಿದ್ದರೂ, ಬೇಜವಾಬ್ದಾರಿ ಹೇಳಿಕೆ ನೀಡಿ ಸುಮ್ಮನಿದ್ದರು. ಸಮಸ್ಯೆಯ ಬಗ್ಗೆ ಗಂಭೀರತೆ ಅರಿತು ಬುಧವಾರದಂದು ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ, ಜೆಇಯವರಿಗೆ ಸ್ಥಳದಿಂದ ಕರೆಮಾಡಿ ಕೂಡಲೇ ಮರವನ್ನು ತೆರವುಗೊಳಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News