ಲ್ಯಾಪ್‌ಟಾಪ್, ಟ್ಯಾಬ್ಲೆಟ್ ನಿಷೇಧ: ಈಗ ಬ್ರಿಟನ್ ಸರದಿ

Update: 2017-03-22 14:29 GMT

ಲಂಡನ್, ಮಾ. 22: ಮಧ್ಯ ಪ್ರಾಚ್ಯದ ಕೆಲವು ದೇಶಗಳ ವಿಮಾನ ನಿಲ್ದಾಣಗಳಿಂದ ಅಮೆರಿಕಕ್ಕೆ ಹೊರಡುವ ವಿಮಾನಗಳ ಪ್ರಯಾಣಿಕರು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳನ್ನು ಒಯ್ಯುವುದನ್ನು ಅಮೆರಿಕ ನಿಷೇಧಿಸಿದ ಬೆನ್ನಿಗೇ, ಇಂಥದೇ ನಿರ್ಬಂಧಗಳನ್ನು ಬ್ರಿಟನ್ ವಿಧಿಸಿದೆ.

ಈಜಿಪ್ಟ್, ಜೋರ್ಡಾನ್, ಲೆಬನಾನ್, ಸೌದಿ ಅರೇಬಿಯ, ಟ್ಯುನೀಶಿಯ ಮತ್ತು ಟರ್ಕಿಗಳಿಂದ ಬ್ರಿಟನ್‌ಗೆ ನೇರವಾಗಿ ಹಾರುವ ಪ್ರಯಾಣಿಕರು ತಮ್ಮ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳನ್ನು ಲಗೇಜ್‌ಗಳಲ್ಲಿ ಇಡಬೇಕಾಗುತ್ತದೆ ಎಂದು ಸರಕಾರದ ವಕ್ತಾರರೊಬ್ಬರು ತಿಳಿಸಿದರು.

‘‘ಹೆಚ್ಚುವರಿ ಭದ್ರತಾ ಕ್ರಮಗಳಿಂದ ಪ್ರಯಾಣಿಕರಿಗೆ ಕೊಂಚ ಇರಿಸುಮುರಿಸಾಗಬಹುದು ಮತ್ತು ವಿಮಾನಗಳಲ್ಲಿ ಅಸ್ತವ್ಯಸ್ತತೆ ಉಂಟಾಗಬಹುದು. ಈ ಕ್ರಮಗಳಿಂದ ಉಂಟಾಗುವ ಹತಾಶೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ, ಬ್ರಿಟಿಶ್ ರಾಷ್ಟ್ರೀಯರ ಸುರಕ್ಷತೆಯನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿದೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News