ಶೂನಲ್ಲಿ 1,000 ವಜ್ರಗಳನ್ನು ಸಾಗಿಸುತ್ತಿದ್ದಾತನ ಬಂಧನ

Update: 2017-03-22 14:54 GMT

ಶೆಂಝನ್ (ಚೀನಾ), ಮಾ. 22: ನೆರೆಯ ಹಾಂಕಾಂಗ್‌ನಿಂದ ಚೀನಾದ ಶೆಂಝನ್ ನಗರಕ್ಕೆ 1,000 ವಜ್ರಗಳನ್ನು ತನ್ನ ಶೂಗಳಲ್ಲಿ ಅಡಗಿಸಿಕೊಂಡು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಗುವಾಂಗ್‌ಡಾಂಗ್ ಪ್ರಾಂತದ ಶೆಂಝನ್ ನಗರದ ಸುಂಕ ಅಧಿಕಾರಿಗಳು, ಲುವೊಹು ಬಂದರಿನಲ್ಲಿ ಕಳ್ಳಸಾಗಾಣಿಕೆದಾರನು ತನ್ನ ಶೂಗಳ ಹಿಮ್ಮಡಿಯ ಒಳಗೆ 212.9 ಕ್ಯಾರಟ್ ವಜ್ರಗಳನ್ನು ಅಡಗಿಸಿರುವುದನ್ನು ಪತ್ತೆಹಚ್ಚಿದರು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಈ ವ್ಯಕ್ತಿಯು ಸಂಶಯಾಸ್ಪದವಾಗಿ ಕಂಡುಬಂದನು. ಕೆಲವು ಸಲ ಆತ ತುದಿಗಾಲಲ್ಲಿ ನಡೆಯುತ್ತಿದ್ದನು. ನಾವು ಆತನನ್ನು ನೋಡುತ್ತಿದ್ದೇವೆ ಎನ್ನುವುದು ಆತನ ಗಮನಕ್ಕೆ ಬಂದಾಗ, ಆತ ತಕ್ಷಣ ಸಾಮಾನ್ಯ ನಡಿಗೆಗೆ ಮರಳಿದನು’’ ಎಂದು ಸುಂಕ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News