3.77 ಲಕ್ಷ ಟ್ವಿಟರ್ ಖಾತೆ ಬಂದ್

Update: 2017-03-22 15:01 GMT

ಸ್ಯಾನ್‌ಫ್ರಾನ್ಸಿಸ್ಕೊ, ಮಾ. 22: ರಾಜಕೀಯ ಅಥವಾ ಧಾರ್ಮಿಕ ಹಿಂಸಾಚಾರವನ್ನು ಪ್ರತಿಪಾದಿಸುವ ಬಳಕೆದಾರರ ಸಂದೇಶಗಳಿಂದ ತನ್ನ ಸಾಮಾಜಿಕ ಜಾಲತಾಣವನ್ನು ಮುಕ್ತವಾಗಿಡಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಟ್ವಿಟರ್ ಇಂಕ್ ಮಂಗಳವಾರ ಹೇಳಿದೆ.

ಇಂಥ ಸಂದೇಶಗಳನ್ನು ಪತ್ತೆಹಚ್ಚಲು ಬಳಕೆದಾರರು ಅಥವಾ ಸರಕಾರಗಳ ವರದಿಗಳಿಗಾಗಿ ಕಾಯುವ ಬದಲು, ಸಾಫ್ಟ್‌ವೇರ್‌ಗಳನ್ನು ಹೆಚ್ಚೆಚ್ಚು ಬಳಸುತ್ತಿರುವುದಾಗಿ ಅದು ಹೇಳಿದೆ.

2016ರ ಕೊನೆಯ ಆರು ತಿಂಗಳುಗಳಲ್ಲಿ ಭಯೋತ್ಪಾದನೆ ಪ್ರಚಾರಕ್ಕೆ ಸಂಬಂಧಿಸಿ ಸುಮಾರು 3,77,000 ಖಾತೆಗಳನ್ನು ಅನೂರ್ಜಿತಗೊಳಿಸಿರುವುದಾಗಿ ಟ್ವಿಟರ್ ತಿಳಿಸಿದೆ.

ಈ ಪ್ರಕಾರ, ತಿಂಗಳಿಗೆ ಸುಮಾರು 63,000 ಖಾತೆಗಳನ್ನು ಮುಚ್ಚಿದಂತಾಗಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಈ ಸರಾಸರಿ ಸುಮಾರು 24,000 ದಷ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News