ರೆಡ್ ಎಫ್‌ಎಂ ಸೂಪರ್ ಸಾಧಕಿ ಪ್ರಶಸ್ತಿ ಪ್ರದಾನ
ಮಂಗಳೂರು, ಮಾ.22: ವಿಶ್ವ ಮಹಿಳಾ ದಿನದ ಅಂಗವಾಗಿ ರೇಡಿಯೊ ಸ್ಟೇಶನ್ ಸೂಪರ್ ಹಿಟ್ಸ್ 93.5 ರೆಡ್ ಎಫ್‌ಎಂ. ನಡೆಸಿದ ಸೂಪರ್ ಸಾಧಕಿ ಕಾರ್ಯಕ್ರಮದ ಸಮಾರೋಪ ಹಾಗು ಸೂಪರ್ ಸಾಧಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ನಗರದ ಪುರಭವನದಲ್ಲಿ ನಡೆಯಿತು. ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ .ಆರ್ ರತಿದೇವಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ನಾಗವೇಣಿ ಮಂಚಿ, ನಾಟ್ಯದಲ್ಲಿ ನೃತ್ಯವಿಧುಷಿ ಸುಮಂಗಲಾ ರತ್ನಾಕರ್, ಕ್ರೀಡಾ ಕ್ಷೇತ್ರದಲ್ಲಿ ಸುಪ್ರೀತಾ ಪೂಜಾರಿ, ಮನೋರಂಜನಾ ಕ್ಷೇತ್ರದಲ್ಲಿ ಸಂಧ್ಯಾ ಶೆಣೈ, ಸಂಗೀತದಲ್ಲಿ ಪಲ್ಲವಿ ಪ್ರಭು, ಶಿಕ್ಷಣ ಕ್ಷೇತ್ರದಲ್ಲಿ ಡಾ.ಬಿ.ಕೆ. ಸರೋಜಿನಿ, ಸಮಾಜ ಸೇವೆಯಲ್ಲಿ ಗೀತಾ ಆರ್. ಶೆಟ್ಟಿ, ರೆಡ್‌ಎಫ್‌ಎಂ ಸೂಪರ್ ಸಾಧಕಿ ಪ್ರಶಸ್ತಿ ಪಡೆದುಕೊಂಡರು.
ಮೇಯರ್ ಕವಿತಾ ಸನಿಲ್ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಡಾ.ಎಂ ಮೋಹನ್ ಆಳ್ವ , ಮಾಜಿ ಸಚಿವ ಕೃಷ್ಣ ಪಾಲೆಮಾರ್, ಡಿಸಿಪಿ ಡಾ.ಸಂಜೀವ್ ಪಾಟೀಲ್, ಪತ್ರಕರ್ತ ಪಿ.ಬಿ. ಹರೀಶ್ ರೈ, ಹಿರಿಯ ರಂಗಭೂಮಿ ನಟ ವಿ.ಜಿ. ಪಾಲ್, ಖ್ಯಾತ ತುಳು ಚಿತ್ರನಟಿ ಸೋನಲ್ ಮೊಂತೆರೋ, ರೆಡ್‌ಎಫ್‌ಎಂ ಸ್ಟೇಷನ್ ಹೆಡ್ ಶೋಬಿತ್ ಶೆಟ್ಟಿ, ರೆಡ್‌ಎಫ್‌ಎಂ ನಿರ್ಮಾಪಕರಾದ ಯಶ್‌ರಾಜ್, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ರೆಡ್‌ಎಫ್‌ಎಂ ಆರ್‌ಜೆಗಳಾದ ಪ್ರಸನ್ನ , ನಯನಾ, ರಶ್ಮಿ, ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು. ವೆಲಾಸಿಟಿ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ತಸ್ಲೀಮಾರಿಂದ ಮಿಮಿಕ್ರಿ ಹಾಗು ಪಲ್ಲವಿ ಪ್ರಭು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.