×
Ad

ಬ್ರಿಟಿಷ್ ಸಂಸತ್ತಿನ ಬಳಿ ಗುಂಡು ಹಾರಾಟ ?

Update: 2017-03-22 20:47 IST

ಲಂಡನ್ , ಮಾ. 22  : ಇಲ್ಲಿನ ಸೆಂಟ್ರಲ್ ಲಂಡನ್ ನಲ್ಲಿರುವ ಸಂಸತ್ತಿನ ಸಮೀಪದಲ್ಲಿ ಗುಂಡಿನ ಹಾರಾಟ ನಡೆದ ಶಬ್ದ ಕೇಳಿಬಂದಿದೆ ಎಂದು ಬಿಬಿಸಿ ವರದಿ ಮಾಡಿದೆ. ಒಬ್ಬರು ಅಥವಾ ಇಬ್ಬರಿಗೆ ಗುಂಡಿನ ಏಟು ಬಿದ್ದಿದೆ ಅಥವಾ ಇರಿಯಲಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಖಚಿತವಾಗಿಲ್ಲ.  ಇಲ್ಲಿನ ಕಟ್ಟಡಗಳ ಹೊರಗೆ ದೊಡ್ಡ ಶಬ್ದಗಳು ಕೇಳಿ ಬಂದಿರುವ ಬಗ್ಗೆ ಪತ್ರಕರ್ತರು ಹಾಗು ರಾಜಕಾರಣಿಗಳು ಟ್ವೀಟ್ ಮಾಡಿದ್ದಾರೆ ಎಂದು ಅದು ಹೇಳಿದೆ. ಆದರೆ ಇದು ಸ್ಪಷ್ಟವಾಗಿ ಏನು ಎಂಬುದು ಈವರೆಗೆ ಖಚಿತವಾಗಿಲ್ಲ. 

ದೊಡ್ಡ ಶಬ್ದ, ಆ ಬಳಿಕ ಕೂಗಾಟ, ಕೋಲಾಹಲ ಕಂಡು ಬಂತು ಎಂದು ಇಂಡಿಪೆಂಡೆಂಟ್ ನ ರಾಜಕೀಯ ಸಂಪಾದಕ ಟಾಮ್ ಪೆಕ್ ಟ್ವೀಟ್ ಮಾಡಿದ್ದಾರೆ. 

ಕೈಯಲ್ಲಿ ಚಾಕು ಹಿಡಿದಿರುವ ವ್ಯಕ್ತಿಯೊಬ್ಬ ಬಿದ್ದಿರುವ ಹಾಗು ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ಕಂಡು ಬಂದಿವೆ.  ಸಂಸತ್ತಿನ ಒಳಗಿನ ಕಚೇರಿಗಳಲ್ಲಿರುವ ಸಿಬ್ಬಂದಿಗಳಿಗೆ ಅಲ್ಲೇ ಇರುವಂತೆ ಸೂಚಿಸಲಾಗಿದೆ. 

ಸಂಸತ್ ಸದಸ್ಯರು ಮೂರು ಅಥವಾ ನಾಲ್ಕು ಗುಂಡಿನ ಹಾರಾಟ ನಡೆದ ಶಬ್ದ ಕೇಳಿದ್ದಾರೆ ಎಂದು ಬಿಬಿಸಿ ವರದಿಗಾರ್ತಿ ಲಾರಾ ಕ್ಯೂಸೆನ್ ಬರ್ಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News