×
Ad

ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ

Update: 2017-03-22 20:52 IST

ಉಳ್ಳಾಲ,ಮಾ.22: ಯೆನೆಪೊಯ ವಿಶ್ವವಿದ್ಯಾನಿಲಯದ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿವಿಶ್ವ ಸಮಾಜ ಕಾರ್ಯ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ಯೆನೆಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ವಾಮಂಜೂರಿನ ಅವೆ ಮ ರಿಯ ಶಾಮಕ ಆರೈಕೆ ಕೇಂದ್ರದ ನಿರ್ದೇಶಕಿ ಡಾ. ಲವಿನಾ ನೊರೊನ್ಹ ಸಮುದಾಯ ಆಧಾರಿತ ಆರೋಗ್ಯ ಸೇವೆ- ಸಮಾಜ ಕಾರ್ಯ ದೃಷ್ಟಿಕೋನಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ,  ಆರೋಗ್ಯ ಕಲ್ಪನೆಗಳು,ಆರೋಗ್ಯ ಸೇವಾ ಕೇತ್ರದಲ್ಲಿ ಪ್ರಚಲಿತ ವಿದ್ಯಮಾನಗಳು, ಸಮಾಜ ಕಾರ್ಯ ಕಲ್ಪನೆ, ತತ್ವಗಳು, ಮೌಲ್ಯಗಳು ಹಾಗೂ ಸಮುದಾಯ ಆಧಾರಿತ ಆರೋಗ್ಯ ಸೇವೆಯ ಪರಿಕಲ್ಪನೆ ಮೊದಲಾದ ಅಂಶಗಳ ಕುರಿತು ಪ್ರಸ್ತಾಪಿಸಿದರು.ಕೇವಲ ಭೌತಿಕ ಆರೋಗ್ಯಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೆ ಆರೋಗ್ಯದ ಎಲ್ಲಾ ಆಯಾಮಗಳ ಬಗ್ಗೆ ಒತ್ತು ನೀಡುವುದರೊಂದಿಗೆ ಪ್ರತಿಬಂಕ ಶಿಕ್ಷಣದ ಜತೆಗೆ ರೋಗಿಯು ಸಹಜ ಸ್ಥಿತಿಗೆ ಮರಳಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಆರೋಗ್ಯ ಸೇವೆ ಹಾಗೂ ಸಮಾಜ ಕಾರ್ಯ ವೃತ್ತಿನಿರತರು ಅನುಸರಿಸಬೇಕೆಂದು ಅಭಿಪ್ರಾಯ ಪಟ್ಟರು.

ರೋಗಿಗಳನ್ನು ಕೇವಲ ಹೆಸರು ರಹಿತ ನಂಬರುಗಳಾಗಿ ಪರಿಗಣಿಸದೆ ಸೇವೆಯನ್ನು ನೀಡುವಾಗ ಅವರ ಭಾವನೆಗಳು, ದೃಷ್ಟಿಕೋನ, ವರ್ತನೆ, ಸಾಮಾಜಿಕ, ಸಾಂಸ್ಕೃತಿಕ,ಆಧ್ಯಾತ್ಮಿಕ ಹಾಗೂ ಆರ್ಥಿಕ ಅಂಶಗಳ ಕುರಿತು ಕೂಡಾ ಮಹತ್ವ ನೀಡಲು ಎಲ್ಲಾ ವೃತ್ತಿ ನಿರತರು ಸೂಕ್ಷ್ಮತೆಯನ್ನು ಬೆಳೆಸಿಕೊಂಡಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಬಹುದಾಗಿದೆ ಎಂದರು. ಸಮಾಜ ಕಾಂ ರ್ು ವಿಭಾಗದ ಮುಖ್ಯಸ್ಥರಾದ ಡಾ.ಮೊಹಮ್ಮದ್ ಗುತ್ತಿಗಾರ್ 2017 ಸಾಲಿನ ವಿಶ್ವ ಸಮಾಜಕಾರ್ಯ ದಿನದ ಮಹತ್ವದ ಬಗ್ಗೆ ಕಿರು ಮಾಹಿತಿ ನೀಡಿದರು.  ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಆರ್.ಪಿ. ಪೈ ಅತಿಥಿ ಉಪನ್ಯಾಸಕಾರರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News