ಬಂಟ್ವಾಳ: ಅಕ್ರಮ ಕಸಾಯಿ ಖಾನೆಗೆ ದಾಳಿ

Update: 2017-03-22 15:25 GMT

ಬಂಟ್ವಾಳ, ಮಾ. 22: ಅಕ್ರಮ ಕಸಾಯಿ ಖಾನೆಗೆ ದಾಳಿ ಮಾಡಿದ ಪೊಲೀಸರು ಜಾನುವಾರು, ಮಾಂಸ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಪುದು ಗ್ರಾಮದ ಮಾರಿಪಲ್ಲದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಹಸನಬ್ಬ ಎಂಬವರ ಮನೆಗೆ ತಾಗಿಕೊಂಡು ನಿರ್ಮಿಸಿದ್ದ ಸೆಡ್‌ವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸವನ್ನು ಮಾರುತ್ತಿದ್ದಾರೆಂದು ಬಂದ ಖಚಿತ ವರ್ತಮಾನದಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಈದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಹಸನಬ್ಬ ಪರಾರಿಯಾಗಿದ್ದು ಸೆಡ್‌ನಲ್ಲಿ ಕಟ್ಟಿಹಾಕಿದ್ದ 3 ದನ, 2 ಕರುಗಳು, ಮಾಂಸ ಕಡಿಯುವ ಆಯುಧಗಳು, ತೂಕದ ತಕ್ಕಡಿ ಮತ್ತು ಸುಮಾರು 80 ಕೆ.ಜಿ. ದನದ ಮಾಂಸವನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News