ಕಾಸರಗೋಡಿನ ಆಲಿಯಾ ಶಿಕ್ಷಣ ಸಂಸ್ಥೆಯಿಂದ ಅಲ್ ಬೆರೂನಿ ಇಂಡೋ ಅರಬ್ ಸಾಂಸ್ಕೃತಿಕ ವಿನಿಮಯ ಯೋಜನೆ

Update: 2017-03-22 16:00 GMT

ಮಂಗಳೂರು, ಮಾ. 22 : 75 ನೇ ವರ್ಷದ ಸಂಭ್ರಮದಲ್ಲಿರುವ ಕಾಸರಗೋಡಿನ ಆಲಿಯಾ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಹಾಗು ಹಿತೈಶಿಗಳ ವಿಶೇಷ ಕಾರ್ಯಕ್ರಮವೊಂದು ಇತ್ತೀಚಿಗೆ ದುಬೈಯಲ್ಲಿ ನಡೆಯಿತು. 

ಶಾರ್ಜಾದ ಅಲ್ ಖಾಸಿಮಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಶೀದ್ ಸಾಲಿಹ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಲಿಯಾ ಹಾಗು ಶಾರ್ಜಾ ವಿವಿ ನಡುವೆ ಪರಸ್ಪರ ಸಹಕಾರ ಹಾಗು ವಿನಿಮಯ ಕಾರ್ಯಕ್ರಮಗಳಿಗಾಗಿ ಒಡಂಬಡಿಕೆಗೆ ಡಾ. ರಶೀದ್ ಹಾಗು ಡಾ. ಹಬೀಬ್ ಅವರು ಸಹಿ ಹಾಕಿದರು. 

ಇದೇ ಸಂದರ್ಭದಲ್ಲಿ ಆಲಿಯಾ ಅಲ್ ಬೆರೂನಿ ಇಂಡೋ ಅರಬ್ ಸಾಂಸ್ಕೃತಿಕ ವಿನಿಮಯ ಯೋಜನೆ ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಯಿತು. 800 ವರ್ಷಗಳ ಹಿಂದೆ ಅಲ್ ಬೆರೂನಿ ಎಂಬ ಅರಬ್ ವಿದ್ವಾಂಸ ಹಾಗು ಸಂಶೋಧಕ ಭಾರತದಲ್ಲಿ ಹದಿಮೂರು ವರ್ಷ ನೆಲೆಸಿ ಆಳವಾದ ಅಧ್ಯಯನ ನಡೆಸಿ ಭಾರತ, ಇಲ್ಲಿನ ಧರ್ಮಗಳು, ಸಂಸ್ಕೃತಿ, ಸಂಪ್ರದಾಯಗಳ ಕುರಿತು ಅರಬಿ ಭಾಷೆಯಲ್ಲಿ ವಸ್ತುನಿಷ್ಠವಾಗಿ , ವೈಜ್ಞಾನಿಕವಾದ ಕೃತಿ ರಚಿಸಿದ್ದರು. 

ಅಧ್ಯಕ್ಷತೆ ವಹಿಸಿದ್ದ ಆಲಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸಿ. ಪಿ. ಹಬೀಬ್ ರಹ್ಮಾನ್ ಅವರು ಅರಬಿಕ್ ಭಾಷೆಯ ಮಹತ್ವ ಹಾಗು ಕಳೆದ  75 ವರ್ಷಗಳಲ್ಲಿ ಆಲಿಯಾ ಈ ರಂಗದಲ್ಲಿ ಅನನ್ಯ ಸೇವೆ ಸಲ್ಲಿಸಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News