ಗೋಡೆ ನಿರ್ಮಾಣದಲ್ಲಿ ತೊಡಗಿರುವ ಕಂಪೆನಿಗಳಿಗೆ ದಂಡ

Update: 2017-03-22 16:37 GMT

ಲಾಸ್ ಏಂಜಲಿಸ್, ಮಾ. 22: ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿರುವ ಕಂಪೆನಿಗಳಿಗೆ ದಂಡ ವಿಧಿಸುವ ಮಸೂದೆಯೊಂದನ್ನು ಕ್ಯಾಲಿಫೋರ್ನಿಯದ ಮೂವರು ಸಂಸದರು ಮಂಡಿಸಿದ್ದಾರೆ.

ವಿವಾದಾಸ್ಪದ ಗೋಡೆ ನಿರ್ಮಾಣದಲ್ಲಿ ತೊಡಗಿರುವ ಕಂಪೆನಿಗಳಿಂದ ಹಣ ಹಿಂದಕ್ಕೆ ಪಡೆಯುವಂತೆ ಸೋಮವಾರ ಮಂಡಿಸಲಾದ ಮಸೂದೆಯು ಕ್ಯಾಲಿಫೋರ್ನಿಯದ ಎರಡು ಸರಕಾರಿ ಪಿಂಚಣಿ ನಿಧಿಗಳಿಗೆ ಕರೆ ನೀಡುತ್ತದೆ.

‘‘ಕ್ಯಾಲಿಫೋರ್ನಿಯನ್ನರು ಸೇತುವೆಗಳನ್ನು ನಿರ್ಮಿಸುತ್ತಾರೆ, ಗೋಡೆಗಳನ್ನಲ್ಲ’’ ಎಂದು ಮೂವರು ಸಂಸದರ ಪೈಕಿ ಒಬ್ಬರಾದ ಫಿಲ್ ಟಿಂಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಇದು ಅವಮಾನದ ಗೋಡೆಯಾಗಿದೆ. ನಮಗೆ ಅದರಲ್ಲಿ ಯಾವುದೇ ಪಾಲು ಬೇಕಿಲ್ಲ. ವಲಸೆ ಕುರಿತ ಕತೆಗಳು ಅಮೆರಿಕದ ಇತಿಹಾಸವಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News