ಮದ್ರಸ ಅಧ್ಯಾಪಕರ ಕೊಲೆಗೆ ಎಸ್.ವೈ.ಎಸ್ ಖಂಡನೆ
ಮಂಗಳೂರು,ಮಾ.22:ಕಾಸರಗೋಡು ಚೂರಿ ಎಂಬಲ್ಲಿ ಮಸೀದಿಗೆ ನುಗ್ಗಿ ಕೊಡಗು ಕೊಟ್ಟಮುಡಿ ಆಝಾದ್ ನಗರ ನಿವಾಸಿಯಾದ ರಿಯಾಝ್ ಮುಸ್ಲಿಯಾರ್‌ರವರನ್ನು ಭೀಕರವಾಗಿ ಕೊಲೆಗೈದ ಪೈಶಾಚಿಕ ಘಟನೆಯನ್ನು ಎಸ್.ವೈ.ಎಸ್. ಜಿಲ್ಲಾ ಸಮಿತಿ ಖಂಡಿಸಿ ಈ ಭೀಕರ ಕೊಲೆಯ ಹಿಂದಿರುವ ದುಷ್ಟ ಶಕ್ತಿಗಳನ್ನು ತಕ್ಷಣವೇ ಬಂಧಿಸಿ ಸಮಗ್ರ ತ್ವರಿತ ಉನ್ನತ ತನಿಖೆ ನಡೆಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಿ ಇದರ ಹಿಂದಿರುವ ಕಾಣದ ಕೈಗಳ ಹೆಸರುಗಳನ್ನು ಬಹಿರಂಗಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು, ದಿನೇ ದಿನೇ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ಅಧಿಕಗೊಳ್ಳುತ್ತಿದ್ದು, ಅಲ್ಪ ಸಂಖ್ಯಾತ ಸಮುದಾಯವನ್ನು ಹಾಗೂ ಆರಾಧನಾಲಯಗಳು ಹಾಗೂ ಭೋದನಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ನಗರದ ಜಂಯ್ಯತುಲ್ ಉಲಮಾ ಕೇಂದ್ರ ಕಛೇರಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ. ಹಂಝ ಮದನಿ ಮಿತ್ತೂರು ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಸಿ ಖಂಡಿಸಿ ಮೃತರ ಹೆಸರಲ್ಲಿ ತಹಲೀಲ್ ಸಮರ್ಪಣೆ ಪ್ರಾರ್ಥಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಿದ್ಧೀಕ್ ಸಖಾಫಿ ಮೂಳೂರು, ಕೆ.ಇ. ಸಾಲೆತ್ತೂರು, ಬಾವ ಫಕ್ರುದ್ಧೀನ್, ಕಾಸಿಂ ಪದ್ಮುಂಜೆ, ಸಲೀಲ್ ಹಾಜಿ ಬಜ್ಪೆ, ಹನೀಫ್ ಹಾಜಿ ಉಳ್ಳಾಲ, ಎಸ್.ಎಂ.ಎ. ಅಧ್ಯಕ್ಷರು ಖತರ್ ಬಾವ ಹಾಜಿ, ಎಂ.ಎಚ್. ಉಪ್ಪಿನಂಗಡಿ, ಅಝೀರ್ ಸಖಾಫಿ ಕೊಳ್ತಿಗೆ, ಬಶೀರ್ ಅಹ್ಸನಿ, ಖಾದರ್ ಕಾವೂರು, ಅಶ್ರಫ್ ಕಿನಾರ ಭಾಗವಹಿಸಿದ್ದರು.