×
Ad

ಅರಣ್ಯ ಆಧಿಕಾರಿಗಳ ದಾಳಿ : ಕೃಷ್ಣ ಮೃಗದ ಚರ್ಮ ವಶ

Update: 2017-03-22 22:20 IST

ಪುತ್ತೂರು,ಮಾ.22: ಕೃಷ್ಣ ಮೃಗದ ಚರ್ಮವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಬುಧವಾರ ಪತ್ತೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ವರ್ತಮಾನದ ಮೇಲೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಪಿಲಿಗುಂಡ ಎಂಬಲ್ಲಿ 2 ಕೃಷ್ಣ ಮೃಗದ ಚರ್ಮವನ್ನು ಅಕ್ರಮವಾಗಿ ಮಾರಾಟ ನಡೆಸಲು ಬಸ್ಸು ನಿಲ್ದಾಣದ ಬಳಿಯಲ್ಲಿ ನಿಂತಿದ್ದ ಆರೋಪಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ನಿವಾಸಿ ರಾಮಣ್ಣ ಎಂಬವರ ಪುತ್ರ ಆಂಜನೇಯ ಮತ್ತು ಲಕ್ಷ್ಮಣ್ಣ ಮುಕ್ಕಣ್ಣನವರ್ ಎಂಬವರ ಪುತ್ರ ಪಾಲಾಕ್ಷಪ್ಪ ಬಂಧಿತ ಆರೋಪಿಗಳು.

ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಹೆಚ್ಚುವರಿ ಪ್ರಭಾರ ಪೊಲೀಸ್ ಉಪನಿರೀಕ್ಷಕ ಹರೀಶ್ ಎನ್.ಪಿ, ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಕುಶಾಲಪ್ಪ, ಕರುಣಾಕರ ಬಿ.ಎನ್. ಸುಂದರ ಶೆಟ್ಟಿ, ರಾಧಾಕೃಷ್ಣ, ಸರಸ್ವತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News