ರಿಯಾಝ್ ಉಸ್ತಾದರ ಕೊಲೆ : SJM ಮಂಗಳೂರು ರೇಂಜ್ ಖಂಡನೆ
ಮಂಗಳೂರು,ಮಾ.22: ಕಾಸರಗೋಡಿನ ಚೂರಿ ಜುಮಾ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಜಿಲ್ಲೆಯ ಕೊಟ್ಟಮುಡಿ ಆಝಾದ್ ನಗರ ನಿವಾಸಿ ರಿಯಾಝ್ ಮುಸ್ಲಿಯಾರರ ಹತ್ಯೆಯನ್ನು ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಮಂಗಳೂರು ರೇಂಜ್ ತೀವ್ರವಾಗಿ ಖಂಡಿಸಿದೆ.
ಹಂತಕರು ಯಾವುದೇ ಧರ್ಮದವರಾದರೂ ಕಾನೂನಿನಡಿ ಸೂಕ್ತ ಕ್ರಮ ಕೈಗೊಂಡು ತಕ್ಕ ಶಿಕ್ಷೆ ನೀಡಲು ನಿಯಮ ಪಾಲಕರು ಆಸಕ್ತಿ ವಹಿಸಬೇಕು.ಇಲ್ಲದೇ ಹೋದಲ್ಲಿ ಕಾನೂನಿನೊಂದಿಗಿರುವ ವಿಶ್ವಾಸ ಜನರಿಗೆ ಇಲ್ಲದಾಗುವುದು.
ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಮಸೀದಿಗಳಿಗೂ ರಕ್ಷಣಾ ಇಲಾಖೆಯು ಸೂಕ್ತ ರಕ್ಷಣೆ ನೀಡಬೇಕಾಗಿದ್ದು ಪ್ರತೀ ಮೊಹಲ್ಲಾ ಆಡಳಿತ ಸಮಿತಿಯು ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮನವಿ ಸಲ್ಲಿಸಬೇಕು.ಅಂತೆಯೇ ಕೊಲೆಗೈಯ್ಯಲ್ಪಟ್ಟ ರಿಯಾಝ್ ಉಸ್ತಾದರ ಕುಟುಂಬಕ್ಕೆ ಕೇರಳ ಹಾಗೂ ಕರ್ನಾಟಕ ಸರಕಾರಗಳು ಸೂಕ್ತ ಪರಿಹಾರವನ್ನೂ ನೀಡಬೇಕು.ಅದೇ ರೀತಿ ಹೊರ ರಾಜ್ಯಗಳಲ್ಲಿ ದುಡಿಯುವ ಕನ್ನಡಿಗರ ಜೀವದ ರಕ್ಷಣೆಯನ್ನು ನಮ್ಮ ಕರ್ನಾಟಕ ಸರಕಾರವು ಖಾತ್ರಿ ಪಡಿಸಬೇಕೆಂದು ಎಸ್ ಜೆ ಎಂ ಮಂಗಳೂರು ರೇಂಜ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ,ಖಜಾಂಜಿ ಇಲ್ಯಾಸ್ ಸಅದಿ ಶಾಂತಿನಗರ ಸರಕಾರವನ್ನು ಒತ್ತಾಯಿಸಿದ್ದಾರೆ.