ಸಾಮಾಜಿಕ ಬದಲಾವಣೆಯಲ್ಲಿ ಆಕಾಶವಾಣಿಯ ಪಾತ್ರ ಮಹತ್ವದ್ದು : ಸದಾನಂದ ಪೆರ್ಲ

Update: 2017-03-22 17:24 GMT

ಮೂಡುಬಿದಿರೆ,ಮಾ.22 : ಭಾಷಾ ಶುದ್ಧತೆ, ಸ್ಪಷ್ಟತೆ ಕಾಪಾಡಿಕೊಂಡು ಬರುತ್ತಿರುವ ಆಕಾಶವಾಣಿಯು ಜನಸಂಖ್ಯೆ, ಹಸಿವು, ಬಡತನ ಹಾಗೂ ಅನಕ್ಷರತೆ ಮುಂತಾದ ಬೇರೆ ಬೇರೆ ವಿಷಯಗಳಲ್ಲಿ ಕ್ರಾಂತಿಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದೆ. ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರವನ್ನು ಈ ಮಾಧ್ಯಮ ನಿರ್ವಹಿಸುತ್ತಿದೆ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಹೇಳಿದರು.

 ಅವರು ಮೂಡುಬಿದಿರೆಯ ರೋಟರಿ ಕ್ಲಬ್ ಸಮ್ಮಿಲನ್ ಹಾಲ್‌ನಲ್ಲಿ ಸಂಯೋಜಿಸಿದ ವಾರದ ಮೀಟಿಂಗ್‌ನಲ್ಲಿ ಮುಖ್ಯ ಅತಿಥಿಂಾಗಿ ಪಾಲ್ಗೊಂಡು ಮಾತನಾಡಿದರು.

ಜಾತ್ಯಾತೀತ ಮನೋಭಾವನೆ, ಉತ್ತಮ ದೃಷ್ಠಿಕೋನವನ್ನು ಹೊಂದಿ ರುವ ಆಕಾಶವಾಣಿಯು ಜನಪರವಾಗಿ ಕೆಲಸ ಮಾಡುತ್ತಾ ಬಂದಿದ್ದು,ಬಾನುಲಿ ಜನರ ಧ್ವನಿಯೆನಿಸಿಕೊಂಡಿದೆ.415ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳನ್ನು ಹೊಂದಿ 23 ಪ್ರಮುಖ ಭಾಷೆಗಳಲ್ಲಿ 146 ಉಪಭಾಷೆಗಳಲ್ಲಿ ಪ್ರಸಾರ ಮಾಡುವ ಏಕೈಕ ಮಾಧ್ಯಮವಾಗಿ ಮೂಡಿದೆ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಶಬೀರ್ ಸದಾನಂದ ಪೆರ್ಲ ಅವರನು್ನ ಪರಿಚಯಿಸಿದರು. ಕಾರ್ಯದರ್ಶಿ ಡಾ.ಸುದೀಪ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News