ಮದ್ರಸ ಅಧ್ಯಾಪಕರ ಕೊಲೆ: ಖಂಡನೆ
ಪುತ್ತೂರು,ಮಾ.22: ಕಾಸರಗೋಡಿನ ಚೂರಿ ಎಂಬಲ್ಲಿ ಮದ್ರಸ ಅಧ್ಯಾಪಕ ರಿಯಾರ್ ಮುಸ್ಲಿಯಾರ್ ಅವರ ಹತ್ಯೆಯನ್ನು ಪುತ್ತೂರು ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಷನ್ ಮತ್ತು ಕೂರ್ನಡ್ಕ ರೇಂಜ್ ಮೆನೇಜ್‌ಮೆಂಟ್ ಜಂ ಇಯ್ಯತ್ತುಲ್ ಮುಅಲ್ಲಿಮೀನ್ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಪುತ್ತೂರು ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಝಾಕಿರ್ ಹನೀಫ್ ಉದಯ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಘಟನೆಯನ್ನು ಖಂಡಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ರೇಂಜ್ ಜಂಇಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಬಶೀರ್ ದಾರಿಮಿ, ಸಂಸ್ಥೆಯ ಉಪಾಧ್ಯಕ್ಷರಾದ ಹಸೈನಾರ್ ದರ್ಬೆ, ಬಶೀರ್ ಹಾಜಿ, ಉಮ್ಮರ್ ಹಾಜಿ ಕೋಡಿಂಬಾಡಿ, ಎಲ್.ಟಿ. ರಝಾಕ್ ಹಾಜಿ, ಕೋಶಾಧಿಕಾರಿ ಸಾಲ್ಮರ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.
ಕೂರ್ನಡ್ಕ ರೇಂಜ್ ಮೆನೇಜ್‌ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಕೂರ್ನಡ್ಕ ಇವರ ಅಧ್ಯಕ್ಷತೆಯಲ್ಲಿ ಕೂರ್ನಡ್ಕದಲ್ಲಿ ನಡೆದ ಸಭೆಯಲ್ಲಿ ಜಂ ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮ್ಮರ್ ಫೈಝಿ ಅಜ್ಜಿಕಟ್ಟೆ, ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಸಂಪ್ಯ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಕೂರ್ನಡ್ಕ ಸದರ್ ಮುಅಲ್ಲಿಂ ಶಾಫಿ ದಾರಿಮಿ, ವಾಫಿಯಾ ಕಾಲೇಜ್ ಅಧ್ಯಕ್ಷ ಮುಹಮ್ಮದ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.