ಮೊಗ್ರಾಲ್ ಪುತ್ತೂರು ಮೃಗಾಸ್ಪತ್ರೆಗೆ ಐಎಸ್‌ಒ ಮಾನ್ಯತೆ

Update: 2017-03-22 17:33 GMT

ಕಾಸರಗೋಡು,ಮಾ.22: ರಾಜ್ಯದಲ್ಲೇ ಮೊತ್ತಮೊದಲ ಬಾರಿಗೆ ಮೃಗಾಸ್ಪತ್ರೆಯೊಂದಕ್ಕೆ ಐಎಸ್‌ಒ ಮಾನ್ಯತೆ ಲಭಿಸಿದೆ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಪಂಚಾಯತಿನಲ್ಲಿ ಕಾರ್ಯಾಚರಿಸುತ್ತಿರುವ ಮೊಗ್ರಾಲ್ ಪುತ್ತೂರು ಮೃಗಾಸ್ಪತ್ರೆಗೆ ಐಎಸ್‌ಒ ಮಾನ್ಯತೆ ಲಭಿಸಿದೆ. ಮೊಗ್ರಾಲ್ ಪುತ್ತೂರು ಮೃಗಾಸ್ಪತ್ರೆಯಲ್ಲಿ ಸಂಪೂರ್ಣ ಗುಣಮಟ್ಟ ಪರಿಪಾಲನಾ ವ್ಯವಸ್ಥೆಗಳನ್ನು ಜಾರಿಗೊಳಿಸಲು, ಅತ್ಯಧಿಕ ಶುಶ್ರೂಷೆ ಸೇವೆಗಳನ್ನು ಲಭ್ಯಗೊಳಿಸಲು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ಜಾರಿಗೊಳಿಸಿದ ಯೋಜನೆಯಂಗವಾಗಿ ಐಎಸ್‌ಒ 9001-2015 ಮಾನ್ಯತೆ ಲಭಿಸಿದೆ.

 ಮೊಗ್ರಾಲ್ ಪುತ್ತೂರು ವೆಟರ್ನರಿ ಆಸ್ಪತ್ರೆಗೆ ಲಭಿಸಿದ ಐಎಸ್‌ಒ ಮಾನ್ಯತೆಯ ಘೋಷಣೆಯನ್ನು ಮಾ. 24ರಂದು ಬೆಳಿಗ್ಗೆ 9.30ಕ್ಕೆ ಪಶುಸಂಗೋಪಣಾ-ಅರಣ್ಯ ಇಲಾಕಾ ಸಚಿವ ನ್ಯಾಯವಾದಿ ಕೆ. ರಾಜು ನೆರವೇರಿಸುವರು. ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಪಶುಸಂಗೋಪಣಾ-ಅರಣ್ಯ ಇಲಾಖಾ ಸಚಿವ ನ್ಯಾಯವಾದಿ ಕೆ. ರಾಜು ಅವರು ಮೊಗ್ರಾಲ್ ಪುತ್ತೂರು ಪಂಚಾಯತಿ ಅಧ್ಯಕ್ಷೆ ಎ. ಎ. ಜಲೀಲ್ ಅವರಿಗೆ ಐಎಸ್‌ಒ 9001-2015 ಮಾನ್ಯತಾ ಪತ್ರವನ್ನು ಹಸ್ತಾಂತರಿಸುವರು.

ಸಾರ್ವಜನಿಕರಿಗೆ ಪಶುಸಂಗೋಪಣಾ ಇಲಾಖೆಗೆ ಸಂಬಂಧಿಸಿ ಪ್ರಯೋಜನಕಾರಿಯಾದ ಹಾಗೂ ತಾಂತ್ರಿಕಪರವಾದ ಅತ್ಯುತ್ತಮ ಸೇವೆಗಳನ್ನು ಲಭ್ಯಗೊಳಿಸಿರುವುದರಂಗವಾಗಿ ಮೊಗ್ರಾಲ್ ಪುತ್ತೂರು ವೆಟರ್ನರಿ ್ಪೆನ್ಸರಿಗೆ ಅಂತಾರಾ್ಟ್ರೀಯ ಅಂಗೀಕಾರ ಲಭಿಸಿದೆ. ಐಎಸ್‌ಒ ಮಾನ್ಯತೆ ಲಭಿಸುವುದರೊಂದಿಗೆ ವೆಟರ್ನರಿ ಡಿಸ್ಪೆನ್ಸರಿಯಿಂದ ನೀಡುವ ಎಲ್ಲ ಸೇವೆಗಳಿಗೆ ಗುಣಮಟ್ಟ ಖಾತರಿಪಡಿಸಲು ಸಾಧ್ಯವಾಗಲಿದೆ.

ಮೃಗಾಸ್ಪತ್ರೆ ಐಎಸ್‌ಒ ಮಾಣ್ಯತೆ ಲಭಿಸುವುದರೊಮದಿಗೆ ಆಸ್ಪತ್ರೆಯಲ್ಲಿ ವಿವಿಧ ಸೌಕರ್ಯಗಳು, ಅನುಕೂಲತೆಗಳನ್ನು ವ್ಯವಸ್ಥೆಗೊಳಿಸಿರುವುದಾಗಿ ವೆಟನ್ರಿ ಸರ್ಜನ್ ಡಾ. ಬಬಿತ ಎಂ. ಎಂ. ತಿಳಿಸಿದ್ದಾರೆ. ಪಂಚಾಯತಿನ 15ನೇ ವಾರ್ಡ್ ಅರಫತ್ ನಗರದಲ್ಲಿ ಮೃಗಾಸ್ಪತ್ರೆ ಕಾಯ್ಚೆರಿಸುತ್ತಿದೆ. 2015 ಅಕ್ಟೋಬರ್‌ನಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ಮೃಗಾಸ್ಪತ್ರೆಯನ್ನು ನವೀಕರಿಸಲಾಗಿತ್ತು. ನವೀಕರಣಕ್ಕಾಗಿ ಮೊಗ್ರಾಲ್ ಪುತ್ತೂರು ಪಂಚಾಯತಿ 5ಲಕ್ಷ ರೂ. ವಿನಿಯೋಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News