ಹಕ್ಕಿ ಢಿಕ್ಕಿ ಹೊಡೆದು ಮೂಗು ಮುರಿತಕ್ಕೊಳಗಾದ ಏರ್ ಇಂಡಿಯಾ ವಿಮಾನ !

Update: 2017-03-23 11:35 GMT

ಲಂಡನ್, ಮಾ.23: ಅಹ್ಮದಾಬಾದ್ ನಗರದಿಂದ ನೇವಾರ್ಕ್ ಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವೊಂದಕ್ಕೆ ಅಹ್ಮದಾಬಾದ್-ಲಂಡನ್ ನಡುವಣ ಹಾರಾಟದ ಸಂದರ್ಭ ಹಕ್ಕಿಯೊಂದು ಢಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದ್ದು, ವಿಮಾನ ಸುರಕ್ಷಿತವಾಗಿ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಹಕ್ಕಿ ಢಿಕ್ಕಿ ಹೊಡೆದ ಪರಿಣಾಮ ವಿಮಾನದ ಮೂಗು ಹಾಗೂ ರಾಡಾರ್ ಸಿಸ್ಟಂಗೆ ಹಾನಿಯುಂಟಾಗಿದೆ. ವಿಮಾನ ನೇವಾರ್ಕ್ ನತ್ತ ಸಾಗಬೇಕಿದ್ದರೂ ಮುಂದಿನ ಹಾರಾಟವನ್ನು ರದ್ದುಗೊಳಿಸಿ ಅದು ಲಂಡನ್ ವಿಮಾನ ನಿಲ್ದಾಣದಲ್ಲಿಯೇ ನಿಲುಗಡೆಯಾಗಿದೆ.

ಘಟನೆ ನಡೆದಾಗ ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರೆಂದು ತಿಳಿದುಬಂದಿಲ್ಲ. ಆದರೆ ಲಂಡನ್ ನೇವಾರ್ಕ್ ಹಾಗೂ ನೇವಾರ್ಕ್-ಲಂಡನ್ ವಿಮಾನ ಹಾರಾಟ ರದ್ದುಗೊಂಡಿದೆ ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಪರ್ಯಾಯ ಏರ್ಪಾಟುಗಳನ್ನು ಮಾಡಲಾಗಿದೆ.

ವಿಮಾನದ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು ಮುಂದಿನ ಲಂಡನ್-ಅಹ್ಮದಾಬಾದ್ ಹಾರಾಟ ಸಮಯಕ್ಕೆ ವಿಮಾನದ ದುರಸ್ತಿ ಸಂಪುರ್ಣಗೊಂಡು ಅದು ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News