ಮದರಸ ಅಧ್ಯಾಪಕನ ಹತ್ಯೆಗೆ ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ಖಂಡನೆ

Update: 2017-03-23 12:24 GMT

ಉಳ್ಳಾಲ, ಮಾ.23: ಕಾಸರಗೋಡಿನ ಚೂರಿ ಎಂಬಲ್ಲಿ ನಡೆದ ಮದ್ರಸ ಅದ್ಯಾಪಕ ಕೊಟ್ಟಮುಡಿ ಆಝಾದ್ ನಗರ ನಿವಾಸಿ ರಿಯಾಝ್ ಮುಸ್ಲಿಯಾರ್‌ರ ಭೀಕರ ಹತ್ಯೆಯನ್ನು ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯು ಖಂಡಿಸಿದೆ.

ಕಾಜೂರ್ ತಂಙಳ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಬಂಧಿಸಿ, ಅಪರಾಧಿಗಳಿಗೆ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದೆ.

ಉಪಾಧ್ಯಕ್ಷ ನೆಕ್ಕಿಲಾಡಿಯ ಹಾಜಿ ಇಸ್ಮಾಯಿಲ್ ಮದನಿ, ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಕಟ್ಟತ್ತಿಲ ಕೆ.ಎಂ. ಮದನಿ, ಅಬ್ಬಾಸ್ ಮದನಿ, ತಲಕ್ಕಿ ಮೂಸಲ್ ಮದನಿ, ಸಾಮಣಿಗೆ ಮುಹಮ್ಮದ್ ಮದನಿ, ಕಾಡಾಚಿರ ಅಬ್ದುರ್ರಹ್ಮಾನ್ ಮದನಿ, ಸೈಯದ್ ಅಬ್ದುಸ್ಸಲಾಂ ತಂಙಳ್, ಪಿ.ಕೆ. ಮುಹಮ್ಮದ್ ಮದನಿ, ಬಶೀರ್ ಮದನಿ ಕೂಳೂರು, ಅಬ್ದುಲ್ಲ ಮದನಿ ಮಡಿಕೇರಿ, ಅಕ್ಬರ್ ಅಲಿ ಮದನಿ, ಅಲಿ ಮದನಿ ಸೆರ್ಕಳ, ಮರ್ಸಿನ್ ಮುಹಮ್ಮದ್ ಮದನಿ, ಉಮರ್ ಮದನಿ ಮಚ್ಚಂಪಾಡಿ, ಆದಂ ಮದನಿ ಆತೂರು, ಇಸ್ಮಾಯಿಲ್ ಮದನಿ ಕೊಯ್ಯೂರು, ಮುಫತ್ತಿಸ್ ಅಬ್ದುಲ್ ಹಮೀದ್ ಮದನಿ ಬೊಳ್ಮಾರ್, ಉಮರ್ ಮದನಿ ಪೊಯ್ಯತ್ತಬೈಲ್, ಪರಪ್ಪುಅಬೂಬಕರ್ ಮದನಿ ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ ಈ ಕೃತ್ಯವನ್ನು ಖಂಡಿಸಿ ದುಷ್ಟರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಪಸಂಖ್ಯಾತರ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News