2017ರಲ್ಲೂ ಉಷ್ಣತೆಯಲ್ಲಿ ತೀವ್ರ ಹೆಚ್ಚಳ: ವಿಶ್ವಸಂಸ್ಥೆ

Update: 2017-03-23 13:44 GMT

ವಿಶ್ವಸಂಸ್ಥೆ, ಮಾ. 23: ತೀವ್ರ ರೀತಿಯ ಹವಾಮಾನ ಪರಿಸ್ಥಿತಿಗಳು 2017ರಲ್ಲೂ ಮುಂದುವರಿಯಲಿವೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ತಿಳಿಸಿದೆ.

ಕಳೆದ ವರ್ಷ ಜಾಗತಿಕ ತಾಪಮಾನ ಹೊಸ ದಾಖಲೆಯನ್ನು ಸೃಷ್ಟಿಸಿತ್ತು ಹಾಗೂ ಅತ್ಯಂತ ಕಡಿಮೆ ಪ್ರಮಾಣದ ಸಮುದ್ರ ಮಂಜುಗಡ್ಡೆ ರೂಪುಗೊಂಡಿತ್ತು ಹಾಗೂ ಸಾಗರದ ಉಷ್ಣತೆ ಗರಿಷ್ಟ ಮಟ್ಟಕ್ಕೆ ಏರಿತ್ತು.

ಕೈಗಾರಿಕಾ ಯುಗದ ಹಿಂದಿನ ಕಾಲಕ್ಕೆ ಹೋಲಿಸಿದರೆ, ಕಳೆದ ವರ್ಷದ ಜಾಗತಿಕ ಉಷ್ಣತೆಯು ಸರಾಸರಿ 1.1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿತ್ತು ಹಾಗೂ ಜಾಗತಿಕ ಸಮುದ್ರ ಮಟ್ಟ ದಾಖಲೆ ಎತ್ತರ ತಲುಪಿತ್ತು. ಭೂಮಿಯ ಸಮುದ್ರ ಮಂಜುಗಡ್ಡೆ ವ್ಯಾಪ್ತಿಯು ನವೆಂಬರ್‌ನಲ್ಲಿ ಸರಾಸರಿಗಿಂತ 40 ಲಕ್ಷ ಚದರ ಕಿಲೋಮೀಟರ್‌ಗಳಿಗೂ ಅಧಿಕ ಪ್ರಮಾಣದಷ್ಟು ಕುಸಿದಿತ್ತು.

‘‘ಜಾಗತಿಕ ಉಷ್ಣತೆಯಲ್ಲಿನ ಏರಿಕೆಯು ಹವಾಮಾನ ವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಇತರ ಬದಲಾವಣೆಗಳಿಗೆ ಪೂರಕವಾಗಿದೆ’’ ಎಂದು ವಿಶ್ವ ಹವಾಮಾನ ಸಂಘಟನೆ (ಡಬ್ಲುಎಂಒ)ಯ ಮಹಾಕಾರ್ಯದರ್ಶಿ ಪೆಟೆರಿ ಟಾಲಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News