ಆಕಸ್ಮಿಕ ಬೆಂಕಿ ಲಕ್ಷಂತಾರ ಮೌಲ್ಯದ ಸೊತ್ತು ನಾಶ
Update: 2017-03-23 20:43 IST
ಬಂಟ್ವಾಳ, ಮಾ. 23: ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಕೆಳಗಿನ ವಗ್ಗದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಈ ಮನೆ ಇಲ್ಲಿನ ನಿವಾಸಿ ಪುಂಡಲೀಕ ಪ್ರಭು ಎಂಬವರ ಪತ್ನಿ ಗ್ರಾಮ ಪಂಚಾಯತ್ ಸದಸ್ಯ ಸುಜಾತ ಎಂಬವರಿಗೆ ಸೇರಿದ್ದಾಗಿದೆ.ಬೆಳಗ್ಗೆ 9:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಣಾಪಾಯ ಉಂಟಾಗಿಲ್ಲ. ಆದರೆ ಮನೆಯಲ್ಲಿದ್ದ ಪಿಠೋಪಕರಣ, ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್, ಸಿಬ್ಬಂದಿ ವಾಸುದೇವ ಭೇಟಿ ನೀಡಿ ಪರಿಶೀಲನೆ ನಡೆಸಿದರು.