×
Ad

ಶಿರಾಡಿಗಾಟ್: ಟೆಂಪೋ ಟ್ರಾವೆಲರ್ ಉರುಳಿ ಮೂವರ ಸಾವು; 18 ಮಂದಿಗೆ ಗಂಭೀರ ಗಾಯ

Update: 2017-03-23 21:04 IST

ಸಕಲೇಶಪುರ, ಮಾ.23: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲರ್ ವಾಹನ ಉರುಳಿ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, 18 ಮಂದಿ ಗಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಂಪುಹೊಳೆ ರಾಷ್ಟ್ರೀಯ ಹೆದ್ದಾರಿ 75ರ ತಿರುವಿನಲ್ಲಿ ಗುರುವಾರ ವರದಿಯಾಗಿದೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಶಾಂತಪುರ ಗ್ರಾಮದ ನಂಜಪ್ಪ(65), ಸೇನಮ್ಮ(70) ಹಾಗೂ ಬಾಗೇನಹಳ್ಳಿ ಗ್ರಾಮದ ರಾಜಮ್ಮ (60) ಮೃತಪಟ್ಟವರಾಗಿದ್ದು, ಶಾಂತಪುರ ಗ್ರಾಮದ ಗಂಗಮ್ಮ(55), ನಿಂಗಯ್ಯ(60), ಸಿದ್ದಗಂಗಯ್ಯ(65)ಹೊನ್ನಮ್ಮ(55), ಭೈರೇಗೌಡ(50), ಶರತ್(6), ಜಯಮ್ಮ(60), ನಂದಿಪುರ ಗ್ರಾಮದ ಗೋವಿಂದರಾಜ್(50) ಹಾಗೂ ಜಯಮ್ಮ(45) ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಶಾಂತಪುರ ಗ್ರಾಮದ ರಾಜಮ್ಮನ ಪುತ್ರ ಸತೀಶ್ ಎಂಬವವರ ವಿವಾಹವನ್ನು ಬೆಂಗಳೂರು ಮೂಲದ ಯುವತಿಯೊಂದಿಗೆ ದರ್ಮಸ್ಥಳದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು. ಇದಕ್ಕಾಗಿ ಟೆಂಪೋ ಟ್ರಾವೆಲರ್ ಹಾಗೂ ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಈ ವೇಳೆ ಸಕಲೇಶಪುರ ತಾಲೂಕಿನ ವ್ಯಾಪ್ತಿಯ ಶಿರಾಡಿಘಾಟ್‌ನ ಡಬಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸೇತುವೆಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಚಾಲಕನನ್ನು ಮಂಗಳೂರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನ ಹೆಸರು ವಿಳಾಸ ತಿಳಿದು ಬಂದಿಲ್ಲ.
ವಘಡದಲ್ಲಿ ಮೃತಪಟ್ಟವರ ಪಾರ್ಥಿವ ಶರೀರಗಳನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಗಾಯಾಳುಗಳಿಗೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿ ನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಎಂಟು ಮಂದಿಯನ್ನು ಮಂಗಳೂರಿಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News