×
Ad

ಅಮೆರಿಕದಲ್ಲಿ ಏರೋ ಎಂಐಟಿಗೆ 4ನೇ ಸ್ಥಾನ

Update: 2017-03-23 21:34 IST

ಮಣಿಪಾಲ, ಮಾ.23: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ 20 ಮಂದಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ತಂಡ 'ಏರೋ ಎಂಐಟಿ' ವಿನ್ಯಾಸಗೊಳಿಸಿ, ರೂಪಿಸಿದ ಎಂಎವಿ (ಮೈಕ್ರೋ ಏರಿಯಲ್ ವೆಹಿಕಲ್) ರಿಮೋಟ್ ಕಂಟ್ರೋಲ್ಡ್ ಏರ್‌ಕ್ರಾಪ್ಟ್ ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ನಡೆದ ಮೈಕ್ರೋ ಕ್ಲಾಸ್ ವಿಭಾಗದ ಎಸ್‌ಎಇ ಏರೋ ಡಿಸೈನ್‌ನಲ್ಲಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಏರೋ ಎಂಐಟಿ ತಂಡದ ನಾಯಕ ಶ್ಲೋಕೆ ಚೌಧುರಿ ತಿಳಿಸಿದ್ದಾರೆ.

 ಏರೋ ಎಂಐಟಿ ಕಳೆದ ಏಳು ವರ್ಷಗಳಿಂದ ವಿಶ್ವದ ನಾನಾ ಕಡೆಗಳಲ್ಲಿ ನಡೆಯುವ ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳುತಿದ್ದು, 5ನೇ ವರ್ಷದಲ್ಲಿ 10ನೇ ಸ್ಥಾನ ಪಡೆದಿದ್ದರೆ, ಕಳೆದ ಬಾರಿ ಐದನೇ ಸ್ಥಾನಕ್ಕೆ ಭಡ್ತಿ ಪಡೆದಿತ್ತು. ಇದೀಗ 7ನೇ ಋತುವಿನಲ್ಲಿ ನಾಲ್ಕನೇ ಸ್ಥಾನಕ್ಕೇರಿದ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ತಂಡದಲ್ಲಿ ಚೌಧುರಿ ಅಲ್ಲದೇ, ವಿ.ವಿ.ಹರಿಹರನ್, ಆಯುಷ್ ವರ್ಮ, ಗೌರವ ರಾಜ್‌ಪುತ್, ಸಿದ್ಧಾರ್ಥ ಶುಕ್ಲ, ಅರ್ಜಿತ್ ಸೇಥಿ, ಸಮರ್ಥ ಅಗರ್ವಾಲ, ಆದಿತ್ಯ ರಮೇಶ್, ಯಶಸ್ವಿ ಎಚ್.ಕುಮಾರ್, ಉತ್ಕರ್ಷ ತ್ರಿಪಾಠಿ, ನಿಖಿಲ್ ಥೋಟ, ಬ್ರಿಯಾನ್ ಡಿಸೋಜ, ಶ್ರೀಶ ಮೋಹಲಿಕ್, ಅಂಜಯ್ ಸುಬ್ರಹ್ಮಣ್ಯಂ, ಅರ್ಮತ್ಯ ಗುಪ್ತ, ಲಾವಣ್ಯ ವಿಜ್, ಗಿಲ್ಬರ್ಟ್ ಸೊಯುಸ್, ಕೌಶಿಕ್ ಚಾವಳಿ, ಜೋಯೆಲ್ ಡಿಸೋಜ ಹಾಗೂ ವಿಷ್ಣು ಪ್ರೀತಮ್.
ಟೆಕ್ಸಾಸ್ ಏರೋ ಸ್ಪರ್ಧೆಯಲ್ಲಿ ವಿಶ್ವದ ಖ್ಯಾತನಾಮ ವಿವಿಗಳಾದ ಜೋರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲೂಸಿಯಾನಾ ಸ್ಟೇಟ್ ವಿವಿ, ಟೆಕ್ಸಾಸ್ ಎ ಎಂಡ್ ಎಂ ಸೇರಿದಂತೆ ಭಾರತದ ಹಲವು ವಿವಿಗಳು ಭಾಗವಹಿಸಿದ್ದವು.
 
ಈ ವರ್ಷ ಏರೋ ಎಂಐಟಿ ತಂಡ ಹಲವು ಕಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ಮತ್ತು ಮೂರನೇ ಸ್ಥಾನ, ಕಲ್ಲಿಕೋಟೆ ಎನ್‌ಐಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನೂ ಈ ತಂಡ ಪಡೆದಿತ್ತು.

ತಮ್ಮ ತಂಡಕ್ಕೆದುರಾದ ಸವಾಲುಗಳ ಕುರಿತು ಮಾತನಾಡಿದ ಶ್ಲೋಕೆ ಚೌಧುರಿ, ಈ ವರ್ಷ ನಾವು ಎದುರಿಸಿದ ಅತೀ ದೊಡ್ಡ ಸವಾಲು ಸಂಪನ್ಮೂಲಗಳ ಲಭ್ಯತೆ. ಹೆಚ್ಚಿನ ಬಿಡಿ ಭಾಗಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣ ನಾವು ಅವುಗಳನ್ನು ಹೆಚ್ಚಿನ ಖರ್ಚು ಮಾಡಿ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News