×
Ad

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮಿತಿ ಅಗತ್ಯ: ಎಂ.ಚಂದ್ರಶೇಖರ್

Update: 2017-03-23 23:49 IST

ಮೂಡುಬಿದಿರೆ, ಮಾ.23: ಸಾರ್ವಜನಿಕ ಅಭಿಪ್ರಾಯವನ್ನು ಒಂದುಗೂಡಿಸುವಲ್ಲಿ, ಸಂಪರ್ಕ ಸಾಧನೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ತರ ವಾದದ್ದು. ಇವುಗಳ ಬಳಕೆ ಅಗತ್ಯಕ್ಕಿಂತ ಹೆಚ್ಚಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅದರ ಮೇಲೆ ಹೆಚ್ಚು ಅವಲಂಬನೆಯಾಗುವುದು ಸಲ್ಲದು. ಯಾವುದೇ ಜಾಲತಾಣಗಳಲ್ಲಿ ಏನನ್ನಾದರೂ ಅಪ್‌ಲೋಡ್ ಮಾಡುವ ಮೊದಲು ಜಾಗರೂಕತೆ ಅತೀ ಅವಶ್ಯ’ ಎಂದು ಮಂಗಳೂರು ನಗರ ಪೊಲೀಸ್ ಕಮಿಶನರ್ ಎಂ.ಚಂದ್ರಶೇಖರ್ ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾಗಿದ್ದ ಅತಿಥಿ ಉಪನ್ಯಾಸದಲ್ಲಿ ‘ಸಾಮಾಜಿಕ ಜಾಗೃತಿ’ ಕುರಿತು ಅವರು ಮಾತನಾಡಿದರು. ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿ ತುಂಬಾ ಸಂಕ್ಷಿಪ್ತವಾಗಿರಬೇಕು. ಜಾಲತಾಣಗಳಲ್ಲಿ ವೈಯಕ್ತಿಕ ಫೊಟೋಗಳನ್ನು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಅತಿಯಾಗಿ ದಾಖಲಿಸುವುದು ಸೂಕ್ತವಲ್ಲ. ಇದರಿಂದಾಗಿ ಅಪಾಯಕ್ಕೆ ಸಿಲುಕಿಕೊಂಡವರ ಸಂಖ್ಯೆ ಅಧಿಕವಾಗಿದೆ. ಜಾಲತಾಣಗಳು ಹಾಗೂ ಗೇಮ್ಸ್ ಮೇಲೆ ಹೆಚ್ಚು ಅವಲಂಬಿತರಾಗುವುದು ವಿದ್ಯಾರ್ಥಿಗಳಿಗೆ ಸೂಕ್ತವಲ್ಲ ಎಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿದರು.ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಕಮಿಶನರ್ ಉತ್ತರಿಸಿದರು. ಎಸಿಪಿ ರಾಜೇಂದ್ರ, ಆಳ್ವಾಸ್ ಕಾಲೇಜಿನ ಪ್ರಾಂಶು ಪಾಲ ಡಾ.ಕುರಿಯನ್, ಮಾನವ ಸಂಪನ್ಮೂಲ ವಿಭಾಗದ ಡೀನ್ ಸುರೇಖಾ, ಕಾರ್ಯಕ್ರಮ ಸಂಚಾಲಕಿ ರಾಜಶ್ರೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News