ಮೈಟ್ ದಶಮಾನೋತ್ಸವ ‘ಸೆನ್ಶಿಯಾ-2017’ ಉದ್ಘಾಟನೆ
ಮಂಗಳೂರು, ಮಾ.23: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ತಮ್ಮ ಆಸಕ್ತಿಯ ವಿಷಯದಲ್ಲಿ ಅಧ್ಯಯನ ನಡೆಸಬೇಕು. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಮುಂದುವರಿಯಲು ಹಾಗೂ ಲಭ್ಯವಿರುವ ಅವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ಐಟಿಸಿ ಇನ್‌ಫೊಟೆಕ್ ಇಂಡಿಯಾ ಲಿ. ಮತ್ತು ಡಿಜಿಟಲ್ ಟೆಕ್ನಾಲಜೀಸ್ ಸಂಸ್ಥೆಯ ಜನರಲ್ ಮೆನೇಜರ್ ಅಜಿತ್ ಕುಮಾರ್ ಪಿ.ಎನ್. ಹೇಳಿದರು.
ಅವರು ಬುಧವಾರ ಮೂಡುಬಿದಿರೆಯ ಬಡಗ ಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್‌ನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಮ್ಯಾನೇಜ್‌ಮೆಂಟ್ ಉತ್ಸವ ‘ಸೆನ್ಶಿಯಾ-2017’ನ್ನು ಉದ್ಘಾಟಿಸಿ ಮಾತನಾಡಿದರು.
ಮೈಟ್ ಕಾಲೇಜಿನ ಆಡಳಿತ ಮಂಡಳಿ ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಸಲಹೆಗಾರ ಪ್ರೊ. ಜಿ.ಆರ್.ರೈ ಶುಭಾಶಂಸನಗೈದರು. ಪ್ರಾಂಶುಪಾಲ ಡಾ.ಜಿ.ಎಲ್.ಈಶ್ವರ ಪ್ರಸಾದ್ ಸ್ವಾಗತಿಸಿದರು.
ವಿದ್ಯಾರ್ಥಿನಿ ಅಂಜನಿ ಪ್ರಸ್ತಾವನೆಗೈದರು. ‘ಸೆನ್ಶಿಯಾ’ ಉತ್ಸವದ ಸಂಯೋಜಕಿ ಜಯಶ್ರೀ ಹೆಗ್ಡೆ ವಂದಿಸಿದರು. ವಿದ್ಯಾರ್ಥಿ ಜೆರೆನ್ಸ್ ಕಾರ್ಯಕ್ರಮ ನಿರ್ವಹಿಸಿದರು.