×
Ad

ಉಡುಪಿ: ದ್ವಿಚಕ್ರ ವಾಹನದಲ್ಲಿರಿಸಿದ 3 ಲಕ್ಷ ರೂ. ಕಳವು

Update: 2017-03-24 12:19 IST

ಉಡುಪಿ, ಮಾ.23: ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿರಿಸಿದ್ದ 3 ಲಕ್ಷ ರೂ. ಅನ್ನು ಕಳ್ಳರು ಎಗರಿಸಿರುವ ಘಟನೆ ಉಡುಪಿಯಲ್ಲಿಂದು ಬೆಳಗ್ಗೆ ನಡೆದಿದೆ.

ಇಲ್ಲಿನ ಪ್ರಭಾಕರಣ ಕೋಟ್ಯಾನ್ ಎಂಬವರು ಹಣ ಕಳೆದುಕೊಂಡವರು. ಇವರು ತನ್ನ ಆ್ಯಕ್ಟೀವಾ ಹೋಂಡಾ ದ್ವಿಚಕ್ರ ವಾಹನವನ್ನು ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಿಲ್ಲಿಸಿದ್ದರು. ಈ ವೇಳೆ ತನ್ನಲ್ಲಿದ್ದ 3.50 ಲಕ್ಷ ರೂ.ನಲ್ಲಿ 50 ಸಾವಿರ ರೂ. ಚಿನ್ನಾಭರಣ ಖರೀದಿಸುವ ಉದ್ದೇಶದಿಂದ ತೆಗೆದು ಉಳಿದ ಹಣವನ್ನು ಆ್ಯಕ್ಟೀವಾ ಹೋಂಡಾದಲ್ಲಿರಿಸಿ ಹೋಗಿದ್ದರು. ಅವರು ಅಲ್ಲೇ ಸಮೀಪದ ಜ್ಯುವೆಲ್ಲರಿಯಿಂದ ಚಿನ್ನಾಭರಣ ಖರೀದಿಸಿ ಹಿಂದಿರುಗಿ ನೋಡಿದಾಗ ಸ್ಕೂಟರ್‌ನಲ್ಲಿರಿಸಿದ್ದ 3 ಲಕ್ಷ ರೂ. ಕಳವಾಗಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರಭಾಕರ್ ಕೋಟ್ಯಾನ್ ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News