×
Ad

2016 ರಲ್ಲಿ ದಾಖಲೆಯ ಜಾಗತಿಕ ಸಿನಿಮಾ ಆದಾಯ !: ಎಷ್ಟು ಲಕ್ಷ ಕೋಟಿ ಗೊತ್ತೇ ?

Update: 2017-03-24 12:49 IST

ನ್ಯೂಯಾರ್ಕ್, ಮಾ. 24 : ಕಳೆದ ವರ್ಷ ಜಾಗತಿಕ ಸಿನಿಮಾ ಆದಾಯ ದಾಖಲೆ ಪ್ರಮಾಣದ್ದಾಗಿದ್ದು 38.6 ಬಿಲಿಯನ್ ಡಾಲರ್ ಆಗಿದೆಯೆಂದು ಅಂಕಿಸಂಖ್ಯೆಗಳಿಂದ ತಿಳಿದು ಬಂದಿದ್ದು ಇದು ಅಂದಾಜು ರೂ. 2487290000000 ಆಗಿದೆ.

2016ರಲ್ಲಿ ಅತ್ಯಂತ ಹೆಚ್ಚು ಗಳಿಕೆ ದಾಖಲಿಸಿದ ಚಿತ್ರಗಳೆಂದರೆ ಕ್ಯಾಪ್ಟನ್ ಅಮೇರಿಕಾ : ಸಿವಿಲ್ ವಾರ್, ರೋಗ್ ಒನ್ : ಎ ಸ್ಟಾರ್ ವಾರ್ಸ್‌ ಸ್ಟೋರಿ, ಫೈಂಡಿಂಗ್ ಡೋರಿ, ಝೂಟಿಪಿಯಾ, ದಿ ಜಂಗಲ್ ಬುಕ್, ದಿ ಸೀಕ್ರೆಟ್ ಲೈಫ್ ಆಫ್ ಪೆಟ್ಸ್, ಬ್ಯಾಟ್ ಮೆನ್ ವರ್ಸಸ್ ಸುಪರ್ ಮ್ಯಾನ್ : ಡಾನ್ ಆಫ್ ಜಸ್ಟಿಸ್, ಫೆಂಟಾಸ್ಟಿಕ್ ಬೀಸ್ಟ್ಸ್ ಎಂಡ್ ವೇರ್ ಟು ಫೈಂಡ್ ದೆಮ್, ಡೆಡ್ ಪೂಲ್, ಸುಸೈಡ್ ಸ್ಕ್ವಾಡ್, ಡಾಕ್ಟರ್ ಸ್ಟ್ರೇಂಜ್, ಮೋನಾ, ಸಿಂಗ್, ದಿ ಮರ್ಮೇಡ್, ಎಕ್ಸ್ ಮೆನ್ -ಎಪೊಕಲಿಪ್ಸ್, ಕುಂಗ್ ಫು ಪಾಂಡ 3, ವಾರ್ ಕ್ರಾಫ್ಟ್ ಹಾಗೂ ಲಾ ಲಾ ಲ್ಯಾಂಡ್ ಸೇರಿವೆ. 

ಎಂಪಿಎಎ ಇದರ ವಾರ್ಷಿಕ ಥಿಯೆಟ್ರಿಕಲ್ ಮಾರ್ಕೆಟ್ ಅಂಕಿಸಂಖ್ಯೆಗಳ ವರದಿಯ ಪ್ರಕಾರ ಉತ್ತರ ಅಮೇರಿಕನ್ ಬಾಕ್ಸ್ ಆಫೀಸ್ ಆದಾಯವು 2016ರಲ್ಲಿ 11.4 ಬಿಲಿಯನ್ (ರೂ 72000 ಕೋಟಿ) ಆಗಿದ್ದು ಇದು 2015ಕ್ಕೆ ಹೋಲಿಸಿದಾಗ ಶೇ 2 ಹೆಚ್ಚಾಗಿದೆ. ಇದರರ್ಥ 246 ಮಿಲಿಯನ್ ಜನರು ಕನಿಷ್ಠ ಒಂದು ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದಾರೆ.

ವಿದೇಶಿ ಬಾಕ್ಸ್ ಆಫೀಸ್ ಆದಾಯವು 2015ರಲ್ಲಿ (27.3 ಬಿಲಿಯನ್ ಡಾಲರ್) ಹೋಲಿಸಿದಾಗ 2016ರಲ್ಲಿ 27.2 ಬಿಲಿಯನ್ ಡಾಲರ್ (ರೂ 1.7 ಲಕ್ಷ ಕೋಟಿ) ಆಗಿದ್ದು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಅಮೇರಿಕಾ ಮತ್ತು ಕೆನಡಾ ದೇಶಗಳ್ಲಿ 18ರಿಂದ 24ರ ಹರೆಯದವರು ವರ್ಷವೊಂದಕ್ಕೆ ಸರಾಸರಿ 6.5 ಚಿತ್ರಗಳನ್ನು ವೀಕ್ಷಿಸಿದ್ದಾರೆ. ಅತ್ಯಂತ ಹೆಚ್ಚು ಆದಾಯ ಬಾಚಿಕೊಂಡ ಐದು ಚಿತ್ರಗಳನ್ನು ಅತೀ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉತ್ತರ ಅಮೇರಿಕಾದಲ್ಲಿ ವೀಕ್ಷಿಸಿದ್ದಾರೆ.

2016ರಲ್ಲಿ ವಿಶ್ವದಾದ್ಯಂತ ಒಟ್ಟು ಸಿನಿಮಾ ಪರದೆಗಳ ಸಂಖ್ಯೆ ಶೇ 6ರಷ್ಟು ಹೆಚ್ಚಾಗಿ ಒಟ್ಟು ಸಂಖ್ಯೆ 1,64,000 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News