ಮಾ.25ರಿಂದ ಕುದ್ರೋಳಿಯಲ್ಲಿ ನೇಮೋತ್ಸವ
Update: 2017-03-24 16:05 IST
ಮಂಗಳೂರು, ಮಾ.24: ಕುದ್ರೋಳಿ ಕೊಪ್ಪಲಹಿತ್ಲುವಿನ ಬಬ್ಬುಸ್ವಾಮಿ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಮಾ.25ರಂದು ದೈವದ ಭಂಡಾರ ಏರುವ ಮೂಲಕ ಆರಂಭಗೊಳ್ಳಲಿದೆ. ಮಾ.27ರಂದು ಸಮಾಪನಗೊಳ್ಳಲಿದೆ.
ಮಾ.25ರಂದು ಶ್ರೀಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ, 26ರಂದು ಜುಮಾದಿಬಂಟ, ಪಂಜುರ್ಲಿ ನೇಮೋತ್ಸವ ಹಾಗೂ 27ರಂದು ಇತರ ಪರಿವಾರ ದೈವಗಳಾದ ಧರ್ಮ ದೈವ, ಸಂಕೋಳಿಗೆ ಗುಳಿಗ ಹಾಗೂ ಕೊರಗ ತನಿಯಾ ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ಜರಗಲಿದೆ ಎಂದು ಕ್ಷೇತ್ರ ಗುರಿಕಾರ ದೇವದಾಸ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.