×
Ad

ಅಮೆರಿಕದಲ್ಲಿ ಆಂಧ್ರ ಪ್ರದೇಶದ ತಾಯಿ-ಮಗನ ಕೊಲೆ

Update: 2017-03-24 17:57 IST

ನ್ಯೂ ಜರ್ಸಿ, ಮಾ.24:  ನ್ಯೂ ಜರ್ಸಿಯಲ್ಲಿ ಆಂಧ್ರ ಪ್ರದೇಶ ಮೂಲದ ತಾಯಿ ಹಾಗೂ ಆಕೆಯ  ಏಳರ ಹರೆಯದ ಮಗನ ಶವ   ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.

ಹನುಮಂತ  ರಾವ್ ಅವರ ಪತ್ನಿ ಶಶಿಕಲಾ (40) ಹಾಗೂ  ಪುತ್ರ ಅನೀಶ್ ಸಾಯಿ ಅವರ ಮೃತದೇಹ ನ್ಯೂ ಜರ್ಸಿಯ ಮನೆಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.

ಹನುಮಂತ ರಾವ್  ಮತ್ತು ಶಶಿಕಲಾ ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರ್ ಗಳು. ಅವರು ಕಳೆದ 9 ವರ್ಷಗಳಿಂದ ನ್ಯೂಜೆರ್ಸಿಯಲ್ಲಿ ಹೆಂಡತಿ ಮಗನೊಂದಿಗೆ ನೆಲೆಸಿದ್ದರು . ಹನುಮಂತ ರಾವ್ ಸಿಟಿಎಸ್ ನಲ್ಲಿ ಕೆಲಸದಲ್ಲಿದ್ದು, ಅವರ ಪತ್ನಿ ಶಶಿಕಲಾ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು.  ಹನುಮಂತ ರಾವ್ ನಿನ್ನೆ ಸಂಜೆ  ಮನೆಗೆ ಬಂದಾಗ ಹೆಂಡತಿ ಮತ್ತು ಮಗನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯವಾಡಾದಲ್ಲಿರುವ  ಶಶಿಕಲಾ  ತಾಯಿ ತನ್ನ ಅಳಿಯ(ಹನುಮಂತರಾವ್)ಹನುಮಂತ ರಾವ್ ಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದ್ದು ಇದುವೇ ಮಗಳು ಹಾಗೂ ಮೊಮ್ಮಗನ ಕೊಲೆಗೆ  ಕಾರಣವಾಗಿದೆ ಎಂಬ  ಶಂಕೆ ವ್ಯಕ್ತಪಡಿಸಿದ್ದಾರೆ.  

ಅಮೆರಿಕದಲ್ಲಿ  ಭಾರತ  ಮೂಲದ ಟೆಕ್ಕಿಗಳ ಸರಣಿ ಕೊಲೆ ನಡೆಯುತ್ತಿದ್ದು, ಈ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News