×
Ad

ಗ್ಯಾಸ್ ಗೀಸರ್ ಸೋರಿಕೆಯಿಂದ ಬೆಂಕಿ; ಮೂವರಿಗೆ ಗಾಯ

Update: 2017-03-24 18:56 IST
ಸಾಂದರ್ಭಿಕ ಚಿತ್ರ

ಭಟ್ಕಳ, ಮಾ.24: ಇಲ್ಲಿನ ರಂಗೀಕಟ್ಟೆಯಲ್ಲಿನ ಶಿಕ್ಷಕ ದಂಪತಿಗಳ ಮನೆಯ ಸ್ನಾನಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್ ನಲ್ಲಿ ಸೋರಿಕೆಯುಂಟಾದ ಪರಿಣಾಮ ಬೆಂಕಿ ತಗಲಿದ್ದು ಶಿಕ್ಷಕ ದಂಪತಿ ಹಾಗೂ ಅವರ ಮಗ ಸುಟ್ಟು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ರಾತ್ರಿ ಜರಗಿದೆ.

ಶಿಕ್ಷಕ ದಂಪತಿಗಳಾದ ಉದಯ ನಾಯ್ಕ, ಪುಷ್ಪಲತಾ ನಾಯ್ಕ ಹಾಗೂ ಅವರ ಪುತ್ರ ಮೃಣಾಲ ಎಂಬುವವರೆ ಗ್ಯಾಸ್ ಗೀಸರ್ ಸೋರಿಕೆಯ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು ಬಾಲಕ ಮೃಣಾಲನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News