ಮೂರು ಮಕ್ಕಳಾದರೂ ಮದುವೆಯಾಗದೆ ವಂಚನೆ !
ಪುತ್ತೂರು, ಮಾ.24: ಮದುವೆಯಾಗುವುದಾಗಿ ನಂಬಿಸಿ ಯುವಕರಿಬ್ಬರು ಇಬ್ಬರು ಮಹಿಳೆಯರಿಗೆ ವಂಚನೆ ನಡೆಸಿದ ಪ್ರತ್ಯೇಕ ಪ್ರಕರಣವು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾದಮ ಕಟ್ಟತ್ತಾರು ಎಂಬಲ್ಲಿ ನಡೆದಿದ್ದು, ಓರ್ವ ಮಹಿಳೆಯೊಬ್ಬರನ್ನು ಮದುವೆಯಾಗಿ ನಂಬಿಸಿ ಮಗುವಾದ ಬಳಿಕ ವಂಚಿಸಿದ್ದು, ಇನ್ನೊಂದು ಪ್ರಕರಣದಲಿ ಮಹಿಳೆಯೊಬ್ಬರಿಗೆ ಮೂರು ಮಗುವಾದ ಬಳಿಕವೂ ಮದುವೆಯಾಗದೆ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ನೆಟ್ಟಣಿಗೆಮುಡ್ನೂರು ಗ್ರಾಮದ ಕಟ್ಟತ್ತಾರು ಕರ್ನೂರು ದಿ.ಮಾದ ಎಂಬವರ ಪುತ್ರಿ ಅನಿತಾ(22) ಮತ್ತು ಅದೇ ಪರಿಸರದ ಆನಂದ ಬಾಬು ಎಂಬವರ ಪುತ್ರಿ ಸವಿತ(26) ವಂಚನೆಗೆ ಒಳಗಾದವರು.
ಕಟ್ಟತ್ತಾರು ನಿವಾಸಿ ಆನಂದ ಎಂಬವರ ಪ್ರವೀಣ ಮತ್ತು ಅದೇ ಪರಿಸರದ ಆನಂದ ಎಂಬವರ ಪುತ್ರ ಕೃಷ್ಣಪ್ಪ ಆರೋಪಿಗಳು. ಕಟ್ಟತ್ತಾರು ನಿವಾಸಿ ಆನಂದ ಎಂಬವರ ಪುತ್ರ ಪ್ರವೀಣ ಎಂಬವರು ಐದು ವರ್ಷದ ಹಿಂದೆ ಸ್ಥಳೀಯ ಅನಿತಾ ಎಂಬವರನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಒಂದು ಗಂಡು ಮಗುವಿನ ಜನನಕ್ಕೆ ಕಾರಣಕರಾಗಿದ್ದಾರೆ.
ಬಳಿಕದ ದಿನಗಳಲ್ಲಿಯೂ ಪ್ರವೀಣ್ ತಾನು ನಿನ್ನನ್ನೆ ಮದುವೆಯಾಗುವುದಾಗಿ ನಂಬಿಸಿ ಪ್ರತಿದಿನ ಮನೆಗೆ ಆಗಮಿಸಿ ದೈಹಿಕ ಸಂಪರ್ಕ ನಡೆಸುತ್ತಿದ್ದು ಮದುವೆಯಾಗಲು ವಿಳಂಬ ಮಾಡುತ್ತಿದ್ದರು. ಈ ನಡುವೆ ಪ್ರವೀಣ್‌ರವರು ಪ್ರಸ್ತುತ ಬೇರೊಂದು ಹುಡುಗಿಯ ಜೊತೆ ಮದುವೆಯಾಗುವುದಾಗಿ ತಿಳಿದ ಹಿನ್ನೆಲೆಯಲ್ಲಿ ಮಾ.22ರಂದು ಪ್ರವೀಣ್‌ನನ್ನು ವಿಚಾರಿಸಿದಾಗ ಆತ ಮದುವೆಯಾಗಲು ನಿರಾಕರಿಸಿ ಬೇರೆ ಮದುವೆ ಆಗುವುದಾಗಿ ತಿಳಿಸಿರುವುದಾಗಿ ಅನಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಪ್ರವೀಣ್ ಅವರ ಸಹೋದರ ಕಟ್ಟತ್ತಾರು ನಿವಾಸಿ ಆನಂದ ಎಂಬವರ ಪುತ್ರ ಕೃಷ್ಣಪ್ಪ ಎಂಬಾತ ಸ್ಥಳೀಯ ಬಾಬು ಎಂಬವರ ಪುತ್ರಿ ಸವಿತಾರವರೊಂದಿಗೆ ಎಂಟು ವರ್ಷದ ಹಿಂದೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ.
ನಂತರದ ದಿನಗಳಲ್ಲಿಯೂ ಕೃಷ್ಣಪ್ಪರವರು ಸವಿತರವರ ಮನೆಗೆ ಪ್ರತಿ ದಿನ ಬಂದು ಮದುವೆಯಾಗುವುದಾಗಿ ನಂಬಿಸಿ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಈ ನಡುವೆ ಕೃಷ್ಣಪ್ಪ ಬೆರೊಂದು ಹುಡುಗಿಯ ಜೊತೆ ಮದುವೆಯಾಗಲು ಮುಂದಾಗಿರುವ ವಿಚಾರ ತಿಳಿದು ತಾನು ವಿಚಾರಿಸಿದಾಗ ಆತ ತನ್ನನ್ನು ಮದುವೆಯಾಗಲು ನಿರಾಕರಿಸಿ, ಬೇರೊಂದು ಯುವತಿಯ ಜೊತೆ ಮದುವೆಯಾಗಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವಸಂಪ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.