ಉಡುಪಿ: ಆಯುರ್ವೇದ ತಜ್ಞರಿಗಾಗಿ ತರಬೇತಿ ಕಾರ್ಯಕ್ರಮ
ಉಡುಪಿ, ಮಾ.24: ನವದೆಹಲಿ ಕೇಂದ್ರೀಯ ಆಯುಷ್‌ನ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ವತಿಯಿಂದ ಪಂಚಕರ್ಮ, ಕಾಯ ಚಿಕಿತ್ಸಾ, ರೋಗನಿದಾನ ವಿಭಾಗದ ತಜ್ಞರಿಗಾಗಿ ತರಬೇತಿ ಕಾರ್ಯಕ್ರಮವನ್ನು ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆಯುಷ್ ಸಚಿವಾಲಯದ ಸಲಹೆ ಗಾರ ವೈದ್ಯ ಮನೋಜ್ ನೇಸರಿ ಮಾತನಾಡಿ, ರೋಗಿಯನ್ನು ಪರೀಕ್ಷಿಸಲು ನಿಯಮಗಳನ್ನು ತಿಳಿಸುವಾಗ ಉಪನ್ಯಾಸಕರು ಸಂಹಿತೆಯನ್ನು ಪಠಿಸಿ ಅದರಲ್ಲಿನ ವಿಧಿವಿಧಾನಗಳನ್ನು ಬಳಸಿಕೊಳ್ಳುವುದನ್ನು ಹೇಳಿಕೊಡಬೇಕು. ಆಗ ಉತ್ತಮ ಆಯುರ್ವೇದ ವೈದ್ಯರನ್ನು ತಯಾರು ಮಾಡಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಆಯುರ್ವೇದ ವಿವಿಯ ನಿವೃತ್ತ ಪ್ರೊಪೆಸರ್ ಡಾ.ಗುರುದೀಪ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು.
ಆಯುರ್ವೇದದಲ್ಲಿ ಸಂಹಿತೆ ಆಧಾರಿತ ರೋಗಿ ಪರೀಕ್ಷಾ ವಿಧಾನಗಳು ಎಂಬ ವಿಷಯದ ಕುರಿತು ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ನಿವೃತ್ತ ಪ್ರೊಪೆಸರ್ ಮತ್ತು ಆಯುರ್ವೇದ ತಜ್ಞ ಡಾ.ಶ್ರೀನಿವಾಸ ಹೆಜಮಾಡಿ ಮಾತನಾಡಿದರು. ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥ ಪ್ರೊ.ಡಾ.ಜಿ.ಶ್ರೀನಿವಾಸ ಆಚಾರ್ಯ, ಪಂಚಕರ್ಮ ವಿಭಾಗದ ಮುಖ್ಯಸ್ಥ ಪ್ರೊ.ಡಾ.ನಿರಂಜನ್ ರಾವ್, ಕಾಯ ಚಿಕಿತ್ಸಾ ವಿಭಾಗದ ಅಸೋಸಿ ಯೇಟ್ ಪ್ರೊ.ಡಾ.ಪ್ರಕಾಶ್ ಮಂಗಲಸ್ಸೆರಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಸಮಾರೋಪ ಸಮಾರಂಭದಲ್ಲಿ ಉಡುಪಿ ಎಸ್‌ಡಿಎಂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರವಿಶಂಕರ್ ಬಿ., ಕಾರ್ಯಕ್ರಮದ ಸಮನ್ವಯಕಾರ ಡಾ.ನಾಗರಾಜ್, ಡಾ.ಅಶೋಕ್ ಕುಮಾರ್, ಡಾ.ಚೈತ್ರಾ ಹೆಬ್ಬಾರ್ ಉಪಸ್ಥಿತ ರಿದ್ದರು. ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿ ಕಾರಿ ರಾಮಕೃಷ್ಣನ್ ವಂದಿಸಿದರು. ಡಾ.ರಶ್ಮಿ ಕಲ್ಕೂರ ಕೆ., ಡಾ. ಸ್ವಾತಿ ಶೇಟ್, ಡಾ.ಸೀತಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.