×
Ad

ಪೊಲೀಸ್ ಬೂತ್‌ಗೆ ಗುದ್ದಿದ ಲಾರಿ !

Update: 2017-03-24 19:52 IST

ಬಂಟ್ವಾಳ, ಮಾ. 24: ಪೊಲೀಸ್ ಬೂತ್‌ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲಿದ್ದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರು ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಬಂಟ್ವಾಳ ಹೋಂ ಗಾರ್ಡ್ ಸಿಬ್ಬಂದಿ ಮೀನಾಕ್ಷಿ ಗಾಯಗೊಂಡವರು.

ಇವರು ಇಂದು ಬಿ.ಸಿ.ರೋಡ್ ಕೈಕಂಬ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸೇವೆಯಲ್ಲಿದ್ದಾಗ ವೇಗವಾಗಿ ಬಂದ ಲಾರಿಯೊಂದು ರಸ್ತೆ ವಿಭಜಕದಲ್ಲಿದ್ದ ಪೊಲೀಸ್ ಬೂತ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೀನಾಕ್ಷಿಯವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರು ಪರ್ಲ್ಯ ನರ್ಸಿಂಗ್ ಹೋಂನಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News