×
Ad

ಕರ್ಣಾಟಕ ಬ್ಯಾಂಕ್ ಅಂತಾರಾಷ್ಟ್ರೀಯ ಪ್ಲಾಟಿನಂ ಡೆಬಿಟ್ ಕಾರ್ಡ್ ಬಿಡುಗಡೆ

Update: 2017-03-24 23:54 IST

 ಮಂಗಳೂರು, ಮಾ.24: ಕರ್ಣಾಟಕ ಬ್ಯಾಂಕ್ ಮನಿಪ್ಲಾಂಟ್ ರೂಪೇ ಅಂತಾರಾಷ್ಟ್ರೀಯ ಪ್ಲಾಟಿನಂ ಡೆಬಿಟ್ ಕಾರ್ಡ್‌ನ್ನು ಗ್ರಾಹಕರಿಗೆ ಬಿಡುಗಡೆಗೊಳಿಸಿದೆ. ಈ ಕಾರ್ಡ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಈ ಯೋಜನೆಯಾಗಿದೆ. ಪ್ಲಾಟಿನಂ ಡೆಬಿಟ್ ಕಾರ್ಡ್‌ನ್ನು ಗ್ರಾಹಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಟಿಎಂನಿಂದ ಹಣ ಪಡೆಯಲು, ಬಿಲ್ ಪಾವತಿಸಲು ಬಳಸಬಹುದಾಗಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಂ ಭಟ್ ತಿಳಿಸಿದ್ದಾರೆ.

  ಈ ಕಾರ್ಡ್ ದೇಶದೊಳಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ಮತ್ತು ಸಾಮಗ್ರಿ ಪಡೆಯಲು ಬಳಸಬಹುದಾಗಿದೆ. ದಿನದಲ್ಲಿ 75 ಸಾವಿರ ರೂ.ವರೆಗೂ ಡ್ರಾ ಮಾಡಲು ಮತ್ತು 2ಲಕ್ಷದ ಮಿತಿಯವರೆಗೆ ವಸ್ತು ಖರೀದಿಸಲು ಈ ಕಾರ್ಡ್ ಬಳಸಬಹುದಾಗಿದೆ. ಜೊತೆಗೆ 2ಲಕ್ಷದವರೆಗೆ ಅಪಘಾತ ವಿಮಾ ಭದ್ರತೆ, ದೇಶದ 30ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ 300ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ ಎರಡು ಬಾರಿ ತ್ರೈಮಾಸಿಕ ಉಚಿತವಾಗಿ ಲಗೇಜ್ ಸಾಗಾಟದ ಸೌಲಭ್ಯವನ್ನು ಒದಗಿಸುತ್ತದೆ. ಅಲ್ಲದೆ ಇಂಧನ ತುಂಬಲು, ಬಿಲ್ ಪಾವತಿಗೆ, ಇತರ ಆರ್ಥಿಕ ವ್ಯವಹಾರಗಳಿಗೆ ಬಳಕೆ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News