×
Ad

ಫಾ.ಪ್ಯಾಟ್ರಿಕ್ ರೊಡ್ರಿಗಸ್‌ರಿಗೆ ಶ್ರದ್ಧಾಂಜಲಿ

Update: 2017-03-24 23:55 IST

ಮಂಗಳೂರು, ಮಾ.24: ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ರೆ.ಫಾ.ಪ್ಯಾಟ್ರಿಕ್ ರೊಡ್ರಿಗಸ್ ಅವರಿಗೆ ಶ್ರದ್ಧಾಂಜಲಿ ನೀಡುವ ಕಾರ್ಯಕ್ರಮವು ಫಾದರ್ ಮುಲ್ಲರ್ ಆಸ್ಪತ್ರೆಯ ಚಾಪೆಲ್‌ನಲ್ಲಿ ನಡೆಯಿತು.

ಮೃತರ ಪಾರ್ಥಿವ ಶರೀರವನ್ನು ಚಾಪೆಲ್‌ನಲ್ಲಿ ಇಟ್ಟು ಮಂಗಳೂರಿನ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ.ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಲಾಯಿತು.

ಫಾ.ಮುಲ್ಲರ್ ಆಸ್ಪತ್ರೆಯ ಸಿಬ್ಬಂದಿ ವರ್ಗ, ವೈದ್ಯರು ಹಾಗೂ ಕಾಲೇಜುಗಳ ಆಡಳಿತ ವರ್ಗ, ವಿದ್ಯಾರ್ಥಿಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಮೃತರಿಗೆ ಮೊದಲು ಫಾ.ಮುಲ್ಲರ್‌ನ ಮಾಜಿ ನಿರ್ದೇಶಕ ಬ್ಯಾಪಿಸ್ಟ್ ಮಿನೇಜಸ್ ಶ್ರದ್ಧಾಂಜಲಿ ಸಲ್ಲಿಸಿ, ಅವರ ಒಡನಾಟ ಹಾಗೂ ಸೇವೆ, ಸಂಸ್ಥೆಯನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬಂದ ರೀತಿ ಶ್ಲಾಘನೀಯವೆಂದರು.

ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸಂಜೀವ ರೈ ಫಾ. ಪ್ಯಾಟ್ರಿಕ್ ಅವರ ಆಡಳಿತ ವೈಖರಿ, ಸಿಬ್ಬಂದಿ ಜೊತೆ ಅವರ ಒಡನಾಟ ಹಾಗೂ ಆದರ್ಶ ಜೀವನದ ಬಗ್ಗೆ ಕೊಂಡಾಡಿದರು. ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಫಾ. ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ರಿಚರ್ಡ್ ಕುವೆಲ್ಲೊ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ.ರೂಡಾಲ್ಫ್ ರವಿ ಡೇಸಾ, ತುಂಬೆ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ರೋಶನ್ ಕ್ರಾಸ್ತಾ, ದೇರಳಕಟ್ಟೆ ಹೋಮಿಯೋಪತಿ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ವಿನ್ಸೆಂಟ್ ಸಲ್ಡಾನಾ, ಫಾ. ಮುಲ್ಲರ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರೆ.ಫಾ.ಅಜಿತ್ ಮಿನೇಜಸ್ ಮುಂತಾದವರು ಉಪಸ್ಥಿತರಿದ್ದರು. ರೆ.ಫಾ.ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ರೆ.ಫಾ.ರಿಚರ್ಡ್ ಕುವೆಲ್ಲೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News