ಉಳ್ಳಾಲದಲ್ಲಿ ಕುರ್‌ಆನ್ ದ್ವಿತೀಯ ಪಬ್ಲಿಕ್ ಪರೀಕ್ಷೆ
ಉಳ್ಳಾಲ, ಮಾ.25: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್ ಮಂಗಳೂರು, ಕರ್ನಾಟಕ ಸಲಫಿ ಫೌಂಡೇಶನ್, ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್, ರಿಯಾದ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುರ್‌ಆನ್ ದ್ವಿತೀಯ ಪಬ್ಲಿಕ್ ಪರೀಕ್ಷೆಯು ಇತ್ತೀಚೆಗೆ ಇಲ್ಲಿನ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಪವಿತ್ರ ಕುರ್‌ಆನಿನ 69ನೆ ಅಧ್ಯಾಯ ಸೂರಃ ಅಲ್ಹಾಕ್ಕ ಮತ್ತು 70ನೆ ಅಧ್ಯಾಯ ಸೂರಃ ಅಲ್ ಮಆರಿಜ್ ಈ ಎರಡು ಸೂರಃಗಳನ್ನು ಆಧಾರವಾಗಿಟ್ಟು ಪರೀಕ್ಷೆ ನಡೆಸಲಾಯಿತು.
ಇದು ಕುರ್‌ಆನ್ ಬಗ್ಗೆ ತಿಳಿಯದವರಿಗೆ, ಕಲಿಯಲು ಆಸಕ್ತಿ ಹೊಂದಿದವರಿಗೆ ಹತ್ತು ವರ್ಷದೊಳಗೆ ಪವಿತ್ರ ಕುರ್‌ಆನನ್ನು ಪೂರ್ಣವಾಗಿ ಕಲಿಸಿಕೊಡುವ ಯೋಜನೆಯ ದ್ವಿತೀಯ ಪರೀಕ್ಷೆಯಾಗಿದೆ. ಎಸ್.ಕೆ.ಎಸ್.ಎಂ. ಮಂಗಳೂರು ಇದರ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ, ಸಲಫಿ ಎಜುಕೇಶನ್ ಬೋಡ್‌ನ ಕೋಶಾಧಿಕಾರಿ ಕೆ.ಅಹ್ಮದ್ ಬಾವ ಕಣ್ಣೂರು, ಅಧ್ಯಕ್ಷ ಮುಸ್ತಫಾ ದಾರಿಮಿ, ಕಾರ್ಯದರ್ಶಿ ಅಬೂ ಬಿಲಾಲ್ ಎಸ್.ಎಂ., ಇಸ್ಲಾಹೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಝಾಕ್ ಗೋಳ್ತಮಜಲು, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಇದರ ಅಧ್ಯಕ್ಷ ಮೂಸಾ ತಲಪಾಡಿ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇದರ ಅಧ್ಯಕ್ಷೆ ಉಮ್ಮು ಅರ್ಶದ್ ಮತ್ತಿತರರು ಉಪಸ್ಥಿತರಿದ್ದರು.