ಮಾ 26ರಂದು ಮೇಗಿನಪೇಟೆಯಲ್ಲಿ ಸುನ್ನೀ ಆದರ್ಶ ಸಮ್ಮೇಳನ
Update: 2017-03-25 11:18 IST
ವಿಟ್ಲ, ಮಾ.25: ಎಸ್ಸೆಸ್ಸೆಫ್ ಮೇಗಿನಪೇಟೆ-ವಿಟ್ಲ ಇದರ ವತಿಯಿಂದ ಸುನ್ನೀ ಆದರ್ಶ ಸಮ್ಮೇಳನ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಮಾರ್ಚ್ 26ರಂದು ಸಂಜೆ ಮೇಗಿನಪೇಟೆಯಲ್ಲಿ ನಡೆಯಲಿದೆ.
ಸೈಯದ್ ಮುಹಮ್ಮದ್ ತಂಙಳ್ ಕಬಕ ದುವಾಶೀರ್ವಚನಗೈಯಲಿದ್ದು, ಎಸ್ಸೆಸ್ಸೆಫ್ ವಿಟ್ಲ ಡಿವಿಜನ್ ಅಧ್ಯಕ್ಷ ವಿ.ಎಂ.ಅಬೂಬಕರ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಉದ್ಘಾಟಿಸುವರು. ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಭಾಷಣಗೈಯುವರು ಎಂದು ಪ್ರಕಟನೆ ತಿಳಿಸಿದೆ.