×
Ad

​ಐಕಳ ಕಂಬಳ ರದ್ದು

Update: 2017-03-25 15:30 IST

ಮಾ.25: ಕಂಬಳ ನಿಷೇಧ ಕಾನೂನು ರದ್ದಾಗದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಐಕಳ ಕಂಬಳ ರದ್ದುಗೊಂಡಿದೆ.

ಕಿನ್ನಿಗೋಳಿ ಸಮೀಪದ ಐಕಳ ಕಂಬಳ ಇಂದು ನಡೆಯಬೇಕಿತ್ತು. ಆದರೆ ಕಂಬಳಕ್ಕೆ ವಿಧಿಸಿರುವ ನಿಷೇಧ ತೆರವುಗೊಳ್ಳದ ಕಾರಣ ಕಂಬಳವನ್ನು ರದ್ದುಗೊಳಿಸಲಾಗಿದೆ. ಪೊಲೀಸ್ ಬಂದೋಬಸ್ತಿನಲ್ಲಿ ಕಂಬಳಕ್ಕೆ ತಡೆ ವಿಧಿಸಲಾಗಿದೆ.

ಕಂಬಳದ ಪರವಾಗಿ ರಾಜ್ಯ ಸರಕಾರವು ಪ್ರಾಣಿ ಹಿಂಸೆ ತಡೆ ಕಾಯ್ದೆ ಮಂಡಿಸಿದೆ. ಈ ಮಸೂದೆ ರಾಜ್ಯಪಾಲರಿಂದ ರಾಷ್ಟಪತಿ ಅಂಕಿತಕ್ಕೆ ಹೋಗಿತ್ತು. ರಾಷ್ಟ್ರಪತಿ ಅಂಕಿತ ಬೀಳದ ಹಿನ್ನೆಲೆಯಲ್ಲಿ ಕಂಬಳವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News