'ಬೊಲ್ಪು' ತುಳು ಅಲ್ಬಂ ಬಿಡುಗಡೆ
ಉಡುಪಿ, ಮಾ.25: 'ಮದಿಮಲ್' ಆಲ್ಬಂ ಖ್ಯಾತಿಯ ಕಲರವ ತಂಡದ ಎರಡನೆ ತುಳು ಅಲ್ಬಂ 'ಬೊಲ್ಪು'ನ್ನು ತುಳು ಚಿತ್ರನಟ ಭೋಜರಾಜ ವಾಮಂಜೂರು ಶನಿವಾರ ಉಡುಪಿ ಕುಂಜಿಬೆಟ್ಟುವಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಆತ್ಮ ಹತ್ಯೆಗೆ ಶರಣಾಗುವುದನ್ನು ತಡೆಯುವ ಪ್ರಯತ್ನವನ್ನು ಈ ಆಲ್ಬಂ ಹಾಡುಗಳ ಮೂಲಕ ಮಾಡಲಾಗಿದೆ. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಇತರ ಭಾಷೆ ಹಾಗೂ ಧರ್ಮಗಳಿಗೆ ಗೌರವ ಕೊಡುವ ಮೂಲಕ ಕರಾವಳಿಯಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಬೇಕು ಎಂದು ಭೋಜರಾಜ ವಾಮಂಜೂರು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕ ರೋಹಿತ್ ಅಮೀನ್ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಸಂದೇಶ್ ಶೆಟ್ಟಿ ಮಾಣಿಬೆಟ್ಟು, ಮಾರ್ವಿನ್ ಶಿರ್ವ, ಶರತ್ ಕುಮಾರ್ ಉಚ್ಚಿಲ, ಸ್ಮಿತಾ ಸುವರ್ಣ ಭಾಗವಹಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಲ್ಬಂನ ನಟರಾದ ದೇವಿಪ್ರಸಾದ್ ಶೆಟ್ಟಿ, ಪ್ರಜ್ವಲ್ ಬಂಗೇರ, ನಿಶಾನ್ ಬಂಗೇರ, ನಟಿ ಸೆರಲ್ ಶ್ವೇತಾ ಆಳ್ವ, ಖಳನಟ ಪ್ರಶಾಂತ್ ಕುಂಜೂರು, ರಕ್ಷಿತ್ ಕುಮಾರ್, ದೀಪಕ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಶೋಭಿತಾ ಸ್ವಾಗತಿಸಿದರು. ಪ್ರವೀಣ್ ಪೂಜಾರಿ ಕಾರ್ಯ ಕ್ರಮ ನಿರೂಪಿಸಿದರು.