ಪ್ಯಾರಿಸ್ ವಿಮಾನ ನಿಲ್ದಾಣ ದಾಳಿ: ಇಬ್ಬರ ಬಂಧನ
Update: 2017-03-25 21:54 IST
ಪ್ಯಾರಿಸ್, ಮಾ. 25: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಒರ್ಲಿ ವಿಮಾನ ನಿಲ್ದಾಣದಲ್ಲಿ ದಾಂಧಲೆಗೈದ ದುಷ್ಕರ್ಮಿಗೆ ಆಯುಧ ಪೂರೈಸಿದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಫ್ರಾನ್ಸ್ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಆರೋಪ ಹೊರಿಸಿದೆ ಎಂದು ನ್ಯಾಯಾಂಗ ಮೂಲವೊಂದು ಶನಿವಾರತಿಳಿಸಿದೆ.
ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ ಆರೋಪವನ್ನೂ ಇಬ್ಬರು ಶಂಕಿತರ ವಿರುದ್ಧ ಹೊರಿಸಲಾಗಿದೆ.
ಮಾರ್ಚ್ 18ರಂದು ಒರ್ಲಿ ಮಿಮಾನ ನಿಲ್ದಾಣ ಬಂದೂಕುಧಾರಿಯೊಬ್ಬನು ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರ ಬಂದೂಕನ್ನು ಕಸಿಯಲು ಯತ್ನಿಸಿದನು. ಆಗ ಇತರ ಭದ್ರತಾ ಸಿಬ್ಬಂದಿ ಅವನನ್ನು ಗುಂಡು ಹಾರಿಸಿ ಕೊಂದಿದ್ದರು.
ಅವರಿಬ್ಬರೂ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದು, ಹತನಾದ ಭಯೋತ್ಪಾದಕ ಝಿಯಾದ್ ಬೆನ್ ಬೆಲ್ಗಸಮ್‌ನ ಸಮೀಪವೇ ವಾಸಿಸುತ್ತಿದ್ದರು.