ಬುಲೆಟ್ ಬೈಕ್‌ಗೆ ಇನ್ನೋವಾ ಕಾರು ಢಿಕ್ಕಿ
Update: 2017-03-25 23:24 IST
ಮುಲ್ಕಿ, ಮಾ.25: ಬುಲೆಟ್ ಬೈಕ್‌ಗೆ ಇನ್ನೋವಾ ಕಾರು ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆ ರಾಜ್ಯ ಹೆದ್ದಾರಿ 67ರ ಗೇರುಕಟ್ಟೆ ಎಂಬಲ್ಲಿ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಕೆರೆಕಾಡು ನಿವಾಸಿ ಪ್ರಶಾಂತ(25) ಎಂದು ತಿಳಿದು ಬಂದಿದೆ. ಪ್ರಶಾಂತ್ ತನ್ನ ನಿವಾಸದಿಂದ ಕೆಲಸ ನಿಮಿತ್ತ ಮುಲ್ಕಿಗೆ ತೆರಳುತ್ತಿದ್ದ ವೇಳೆ ಮುಲ್ಕಿ ಕಡೆಯಿಂದ ಅತಿವೇಗದಿಂದ ಬಂದ ಇನ್ನೋವ ಕಾರು ಗೇರುಕಟ್ಟೆ ಸಮೀಪ ಬುಲೆಟ್‌ಗೆ ಢಿಕ್ಕಿಯಾಗಿದೆ.
ಢಿಕ್ಕಿಯ ಪರಿಣಾಮ ಪ್ರಶಾಂತ್ ಅವರ ಕಾಲು ಹಾಗೂ ಎಡ ಕೈಗೆ ಗಾಯಗಳಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.